ಆರೋಗ್ಯ ವೃದ್ಧಿಗೆ ಆಯುರ್‌ಗ್ರಾಮ ಸಹಕಾರಿ

ಚಿಕ್ಕೋಡಿ ತಾಲೂಕಿನ ಚಿಂಚಣಿ ಮಠದಲ್ಲಿ ಈಚೆಗೆ ಆಯೋಜಿಸಿದ್ದ ಇಂದ್ರಿಯ ಆರೋಗ್ಯ ಸಪ್ತಾಹವನ್ನು ಡಾ.ಕಿರಣಕುಮಾರ ಮುತ್ನಾಳಿ ಉದ್ಘಾಟಿಸಿದರು. ಎಸ್.ಎಲ್.ಪಾಟೀಲ, ಮಹಾಂತೇಶ ಗುಡ್ನವರ, ಡಾ.ಬಿ.ಬಿ.ದೇಸಾಯಿ ಇತರರಿದ್ದರು.
ಚಿಕ್ಕೋಡಿ ತಾಲೂಕಿನ ಚಿಂಚಣಿ ಮಠದಲ್ಲಿ ಈಚೆಗೆ ಆಯೋಜಿಸಿದ್ದ ಇಂದ್ರಿಯ ಆರೋಗ್ಯ ಸಪ್ತಾಹವನ್ನು ಡಾ.ಕಿರಣಕುಮಾರ ಮುತ್ನಾಳಿ ಉದ್ಘಾಟಿಸಿದರು. ಎಸ್.ಎಲ್.ಪಾಟೀಲ, ಮಹಾಂತೇಶ ಗುಡ್ನವರ, ಡಾ.ಬಿ.ಬಿ.ದೇಸಾಯಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಕಿರಣಕುಮಾರ ಹೇಳಿಕೆ
  • ಚಿಂಚಣಿಯಲ್ಲಿ ಜಾಗೃತಿ ಸಪ್ತಾಹ

ಚಿಕ್ಕೋಡಿ:

ಸಾರ್ವಜನಿಕರಲ್ಲಿ ಆರೋಗ್ಯಕರ ಜೀವನಶೈಲಿ ಉತ್ತೇಜಿಸವಲ್ಲಿ ಆಯುರ್‌ಗ್ರಾಮ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಪ್ರಾಂಶುಪಾಲ ಡಾ.ಕಿರಣಕುಮಾರ ಮುತ್ನಾಳಿ ತಿಳಿಸಿದರು.

ತಾಲೂಕಿನ ಚಿಂಚಣಿ ಅಲ್ಲಮಪ್ರಭು ಮಠದಲ್ಲಿ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಈಚೆಗೆ ಏರ್ಪಡಿಸಿದ್ದ ಆಯುರ್‌ಗ್ರಾಮ ಆರೋಗ್ಯ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮದ ಆರೋಗ್ಯ ಮತ್ತು ರಕ್ಷಣೆಯನ್ನು ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇಂದ್ರಿಯ ಆರೋಗ್ಯ ಜಾಗೃತಿ, ಮನೆ ಮನೆ ಸಮೀಕ್ಷೆ, ಆರೋಗ್ಯ ತಪಾಸಣೆ, ಆರೋಗ್ಯ ಶಿಕ್ಷಣ, ಯೋಗ, ಜೀವನಶೈಲಿ ಮಾರ್ಗದರ್ಶನ ಹಾಗೂ ಇತರ ಆರೋಗ್ಯ ಚಟುವಟಿಕೆಗಳ ಕುರಿತು ವಿವರಿಸಿ, ಗ್ರಾಮಸ್ಥರು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಆಯುರ್ವೇದದ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್.ಎಲ್.ಪಾಟೀಲ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಆಡಳಿತಾಽಕಾರಿ ಮಹಾಂತೇಶ ಗುಡ್ನವರ, ಉಪನ್ಯಾಸಕ ಡಾ.ಬಿ.ಬಿ.ದೇಸಾಯಿ, ಡಾ.ರವಿ ಮಡಿವಾಳರ, ಡಾ.ಶ್ರೀಧರ ಲಕ್ಕುಂಡಿ, ಡಾ.ಸೂರಜ್ ಕುಂಬಾರ, ಡಾ.ಕಾಂಚನಾ ಶರಗಾರ ಹಾಗೂ ಸುದರ್ಶನ ಭಟ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net