ಅಂಕಲಿಯ ಡಾ.ಎನ್.ಎ.ಮಗದುಮ್ಮ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ಡಾ.ದತ್ತಾ ಪಾಟೀಲ, ಡಾ.ಗಿರೀಶ ಕುಲಕರ್ಣಿ ಉದ್ಘಾಟಿಸಿದರು. ಡಾ.ಪ್ರಸನ್ನ ಸವಣೂರ ಇತರರಿದ್ದರು.
ಮಾಂಜರಿ: ಔಷಧದಿಂದ ರೇಬಿಸ್ ಕಾಯಿಲೆ ತಡೆಗಟ್ಟಬಹುದು. ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮಾರಕವಾಗಲಿದೆ ಎಂದು ಡಾ.ಎನ್.ಎ.ಮಗದುಮ್ಮ ಹೇಳಿದರು.
ಸಮೀಪದ ಅಂಕಲಿ ಗ್ರಾಮದ ಡಾ.ಎನ್.ಎ.ಮಗದುಮ್ಮ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೇಬಿಸ್ ಔಷಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೇಬಿಸ್ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದರು.
ಡಾ.ದತ್ತಾ ಪಾಟೀಲ, ಡಾ.ಗಿರೀಶ ಕುಲಕರ್ಣಿ ರೇಬಿಸ್ ತಡೆಗಟ್ಟುವ ಕ್ರಮ, ತುರ್ತು ಚಿಕಿತ್ಸೆ ಮತ್ತು ಲಸಿಕೆ ಮಹತ್ವದ ಕುರಿತು ಮಾಹಿತಿ ನೀಡಿದರು. ಪ್ರಾಚಾರ್ಯ ಡಾ.ಪ್ರಸನ್ನ ಸವಣೂರ, ಉಪಪ್ರಾಚಾರ್ಯ ಡಾ.ರಾಮಗೊಂಡ ಪಾಟೀಲ, ಡಾ.ವಿಶಾಲ ಚೌಗುಲೆ, ಯಾಕೂಬ್ ತಾಂಬಟ್, ಸುನೀಲ ಜನಾಜ ಇತರರಿದ್ದರು.