ಶಾಸಕಿ ಶಶಿಕಲಾ ಜೊಲ್ಲೆ ಕರೆ ಭೋಜ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳ ಉದ್ಘಾಟನೆ ಭೋಜ ಗ್ರಾಮದಲ್ಲಿ ಲಾನುಭವಿಗಳಿಗೆ ಶಾಸಕಿ ಶಶಿಕಲಾ ಜೊಲ್ಲೆ ಸುಕನ್ಯಾ ಸಮೃದ್ಧಿ ಪಾಸ್‌ಬುಕ್ ವಿತರಿಸಿದರು. ಸುಪ್ರಿಯಾ ಜಡಗೆ, ಡಾ.ಸುದರ್ಶನ ಮುರಾಬಟ್ಟೆ, ವಿನೋದ ಸಂಕಪಾಳ ಇದ್ದರು.
Published on:
Copied
Follow Us
ಹೆಣ್ಣು ಮಕ್ಕಳ ಶಿಕ್ಷಣದ ಜತೆಗೆ ಉಜ್ವಲ ಭವಿಷ್ಯಕ್ಕಾಗಿ ಆರ್ಥಿಕ ಭದ್ರತೆ ಸೃಷ್ಟಿಸುವ ಉದ್ದೇಶದಿಂದ ವಿವಿಧ ಸರ್ಕಾರಿ ಯೋಜನೆ ಜಾರಿಗೊಳಿಸಿ ಲಾನುಭವಿಗಳಿಗೆ ತಲುಪಿಸಲು ಬದ್ಧರಾಗಿದ್ದೇವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಸಮೀಪದ ಭೋಜ ಗ್ರಾಮದಲ್ಲಿ ಮಂಗಳವಾರ 40 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ಎರಡು ಅಂಗನವಾಡಿ ಕೇಂದ್ರ ಉದ್ಘಾಟನೆ ಹಾಗೂ ಕಾರದಗಾ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭಾಗ್ಯಲಕ್ಷ್ಮೀ ಯೋಜನೆಯಡಿ ಸುಕನ್ಯಾ ಸಮೃದ್ಧಿ ಪಾಸ್‌ಬುಕ್ ವಿತರಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ, ಆರ್ಥಿಕವಾಗಿ ಸುರಕ್ಷಿತವಾಗಿರಬೇಕೆಂಬ ಉದ್ದೇಶದಿಂದ ವಿವಿಧ ಸರ್ಕಾರಿ ಯೋಜನೆ ಜಾರಿಗೆ ತರಲಾಗುತ್ತಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿ 2006ರಿಂದ 2025ರವರೆಗೆ 30,344 ಅರ್ಜಿ ಮಂಜೂರಾಗಿದ್ದು, ಅವುಗಳಲ್ಲಿ 28,441 ಸಾವಿರಕ್ಕೂ ಹೆಚ್ಚು ಲಾನುಭವಿಗಳಿಗೆ ಬಾಂಡ್ ವಿತರಿಸಲಾಗಿದೆ ಎಂದರು.
ಅಂಗನವಾಡಿ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ, ಆರೋಗ್ಯ ಮಾರ್ಗದರ್ಶನ ಮತ್ತು ವಿವಿಧ ಸರ್ಕಾರಿ ಸೇವೆ ಒದಗಿಸಲಾಗುತ್ತಿದೆ. ಭೋಜದಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಗಳು ಮಕ್ಕಳಿಗೆ ಸುರಕ್ಷಿತ, ಸ್ವಚ್ಛ ವಾತಾವರಣ ಒದಗಿಸುತ್ತದೆ ಎಂದರು.