ಹಿರಿಯ ಸಾಹಿತಿ ಡಾ.ಎಚ್.ಬಿ.ಕೋಲ್ಕಾರ ಮಾತನಾಡಿ, ಪೌರಾಣಿಕ, ಸಾಮಾಜಿಕ, ಭಕ್ತಿಪ್ರಧಾನ, ನಾಟಕ ನೀಡಿದ ಕೊಡುಗೆ ಬೆಳಗಾವಿ ಜಿಲ್ಲೆಗಿದೆ. ಸಮಾನ ಭಾತೃತ್ವ ಬೆಳೆಸಲು ರಂಗಭೂಮಿಯ ಪಾತ್ರ ಅನನ್ಯವಾದದ್ದು. ಇಂದಿನ ಆಧುನಿಕತೆಯಲ್ಲಿ ಕುಟುಂಬ ಸಮೇತ ನೋಡುವ ಸೃಜನಶೀಲ ನಾಟಕಗಳು ಮೂಡಿಬರಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.