ಗಾಂಜಾ ಮಾರಾಟಗಾರನ ಬಂಧನ

ಬಂಧನ
ಬಂಧನ
Published on
ಬೆಳಗಾವಿ: ಕ್ಯಾಂಪ್ ಫಾತಿಮಾ ಚರ್ಚ್ ಬಳಿಯ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿರುವ ಕ್ಯಾಂಪ್ ಠಾಣೆ ಪೊಲೀಸರು ಸುಳಗಾದ ಗಂಗಾರಾಮ ಪರಶುರಾಮ ಸಿಂಗನಗುಡಿ(24)ಯನ್ನು ಬಂಧಿಸಿ 56,500 ರೂ. ಮೌಲ್ಯದ ಗಾಂಜಾ 1.130 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಮಾಡಲು ಮಹಾರಾಷ್ಟ್ರದ ಸೊಲ್ಲಾಪುರದ ಸುನೀಲ ಪೂರೈಕೆ ಮಾಡುತ್ತಿರುವುದಾಗಿ ಆರೋಪಿ ಮಾಹಿತಿ ನೀಡಿದ್ದು, ಆತನ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮದ್ಯ ಸೇವನೆ: ಕೈಗಾರಿಕಾ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಅನಗೋಳದ ಸುಭಾಸ ವಾಜಂತ್ರಿ (38) ವಿರುದ್ಧ ಉದ್ಯಮಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net