ಅರಿಹಂತ ಶುಗರ್ಸ್ ನಡೆ ಉತ್ತಮ

ಬೋರಗಾಂವ ಪಟ್ಟಣದಲ್ಲಿ ಅರಿಹಂತ ಸಕ್ಕರೆ ಕಾರ್ಖಾನೆ ಮುಖಂಡರಾದ ಅಭಿನಂದನ ಪಾಟೀಲ ಹಾಗೂ ಉತ್ತಮ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ದರಿಖಾನ ಅಜ್ಜ, ರಾಜು ಖಿಚಡೆ, ಪಂಕಜ ತಿಪ್ಪಣ್ಣವರ, ರಮೇಶ ಪಾಟೀಲ ಇತರರಿದ್ದರು.
ಬೋರಗಾಂವ ಪಟ್ಟಣದಲ್ಲಿ ಅರಿಹಂತ ಸಕ್ಕರೆ ಕಾರ್ಖಾನೆ ಮುಖಂಡರಾದ ಅಭಿನಂದನ ಪಾಟೀಲ ಹಾಗೂ ಉತ್ತಮ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ದರಿಖಾನ ಅಜ್ಜ, ರಾಜು ಖಿಚಡೆ, ಪಂಕಜ ತಿಪ್ಪಣ್ಣವರ, ರಮೇಶ ಪಾಟೀಲ ಇತರರಿದ್ದರು.
Published on
ಬೋರಗಾಂವ: ಜೈನಾಪುರ ಅರಿಹಂತ ಶುಗರ್ ಇಂಡಸ್ಟ್ರೀಸ್‌ನಿಂದ ಕಬ್ಬು ಬೆಳೆಗಾರರ ಆರ್ಥಿಕ ಅಭಿವೃದ್ಧಿಗಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಭಿನಂದನ ಪಾಟೀಲ ಮತ್ತು ಯುವನಾಯಕ ಉತ್ತಮ ಪಾಟೀಲ ಪ್ರಯತ್ನಿಸಿದ್ದಾರೆ. ಯಾವುದೇ ಉಪಉತ್ಪನ್ನಗಳಿಲ್ಲದಿದ್ದರೂ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯಿಂದ 3,300 ಹಾಗೂ ಸರ್ಕಾರದಿಂದ 50 ರೂ. ದರ ೋಷಣೆ ಮಾಡಿದ ರಾಜ್ಯದ ಏಕೈಕ ಕಾರ್ಖಾನೆಯಾಗಿದೆ ಎಂದು ಸ್ವಾಭಿಮಾನಿ ಶೇತಕರಿ ಸಂಘಟನೆ ರೈತ ಮುಖಂಡ ರಾಜು ಖಿಚಡೆ ಹೇಳಿದರು.
ಅರಿಹಂತ ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ 3,350 ರೂ. ದರ ಘೋಷಿಸಿದ್ದಕ್ಕಾಗಿ ಪಟ್ಟಣದಲ್ಲಿ ಸ್ವಾಭಿಮಾನಿ ಶೇತಕರಿ ಸಂಘಟನೆ ಮತ್ತು ರಾಜ್ಯ ರೈತ ಸಂಘದಿಂದ ಸೋಮವಾರ ಅಭಿನಂದನ ಪಾಟೀಲ ಮತ್ತು ಉತ್ತಮ ಪಾಟೀಲ ಅವರಿಗೆ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ರೈತರ ಕಲ್ಯಾಣಕ್ಕಾಗಿ ಪಾಟೀಲ ಸಹೋದರರ ಪ್ರಯತ್ನಗಳು ಎಲ್ಲ ಕಾರ್ಖಾನೆಗಳಿಗೆ ಮಾರ್ಗದರ್ಶಿಯಾಗಿವೆ ಎಂದರು.
ರೈತ ಸಂಘದ ಗೌರವಾಧ್ಯಕ್ಷ ದರಿಖಾನ ಅಜ್ಜ ಮಾತನಾಡಿ, ದಿ.ರಾವಸಾಹೇಬ ಪಾಟೀಲ ರೈತರ ಬೆನ್ನಿಗೆ ದಢವಾಗಿ ನಿಂತಿದ್ದರು. ಸಹಕಾರಿ ಸಂಘದ ಮೂಲಕ ರೈತರಿಗೆ ಕಾಲಕಾಲಕ್ಕೆ ಸಾಲ ನೀಡಿ ಆರ್ಥಿಕ ಜೀವನಮಟ್ಟ ಹೆಚ್ಚಿಸಿದ್ದಾರೆ ಎಂದರು.
ಯುವನಾಯಕ ಉತ್ತಮ ಪಾಟೀಲ ಮಾತನಾಡಿ, ಅರಿಹಂತ ಸಕ್ಕರೆ ಕಾರ್ಖಾನೆಯ ಮೂಲಕ ಕಬ್ಬಿಗೆ ಸರಿಯಾದ ಬೆಲೆ, ತೂಕ ಮತ್ತು ಕಡಿಮೆ ಬೆಲೆಯಲ್ಲಿ ಸಕ್ಕರೆ ಒದಗಿಸುತ್ತಿದ್ದೇವೆ. ರೈತರು ಅಭಿವದ್ಧಿ ಹೊಂದಿದಾಗ ಮಾತ್ರ ದೇಶ ಅಭಿವದ್ಧಿ ಹೊಂದುತ್ತದೆ. ಆದ್ದರಿಂದ ರೈತರ ಅಭಿವದ್ಧಿಗೆ ಆದ್ಯತೆ ನೀಡಿದ್ದೇವೆ. ಪ್ರಸಕ್ತ ವರ್ಷ ಅತಿವಷ್ಟಿಯಿಂದ ರೈತರು ಸಂಕಷ್ಟದಲ್ಲಿರುವುದನ್ನು ಅರಿತು ಟನ್ ಕಬ್ಬಿಗೆ 3,350 ರೂ. ಬೆಲೆ ನಿಗದಿ ಮಾಡಿದ್ದೇವೆ ಎಂದರು.
ಉದ್ಯಮಿ ಅಭಿನಂದನ ಪಾಟೀಲ, ಸಂಘಟನೆಯ ಮುಖಂಡರಾದ ಪಂಕಜ ತಿಪ್ಪಣ್ಣವರ, ರಮೇಶ ಪಾಟೀಲ, ತಾತ್ಯಾಸೋ ಕೇಸ್ತೆ, ತಾತ್ಯಾಸಾಹೇಬ ಪಾಟೀಲ, ಶೀತಲ ಬಾಗೆ, ಬಾಬಾಸೋ ಪಾಟೀಲ, ಸುಭಾಷ ಚೌಗುಲೆ, ತಾತ್ಯಾಸಾಹೇಬ ಬಸಣ್ಣವರ, ಅಭಿನಂದನ ಫಿರಂಗಣ್ಣನವರ, ರಮೇಶ ಮಾಲಗಾವೆ, ಪ್ರಕಾಶ ತಾರದಾಳೆ, ಪೋಪಟ ಪಾಟೀಲ ಬಂಟಿ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net