ಹಳೇ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ

ಸನ್ಮತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗುರು ವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿನೋದ ಬರಗಾಲೆ, ಬಿ.ಬಿ.ಪಾಟೀಲ, ಅಕ್ಕಾತಾಯಿ ಮುಜಾವರ ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.
ಸನ್ಮತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗುರು ವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿನೋದ ಬರಗಾಲೆ, ಬಿ.ಬಿ.ಪಾಟೀಲ, ಅಕ್ಕಾತಾಯಿ ಮುಜಾವರ ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.
Published on

ಕಾಗವಾಡ:

ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ಸನ್ಮಾನಿಸಿರುವ ಗುರುಭಕ್ತಿ ಶ್ಲಾಘನೀಯ ಎಂದು ಸನ್ಮತಿ ವಿದ್ಯಾಲಯದ ನಿವೃತ್ತ ಮುಖ್ಯ ಶಿಕ್ಷಕ ಎಂ.ಎ.ಗಣೆ ಹೇಳಿದರು.

ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಸನ್ಮತಿ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೧೯೮೮-೮೯ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹಸಮ್ಮಿಲನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾರದಾದೇವಿ ಭಾವಚಿತ್ರಕ್ಕೆ ಪೂಜೆ, ಅಗಲಿದ ಗುರುಗಳಿಗೆ ಹಾಗೂ ವರ್ಗ ಮಿತ್ರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಿಸಿದ ಗುರುಗಳಿಗೆ ಪಾದಪೂಜೆ ಮಾಡಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರು, ಹಳೇ ವಿದ್ಯಾರ್ಥಿಗಳು

ಅನಿಸಿಕೆ ಹಂಚಿಕೊಂಡರು.
ಸನ್ಮತಿ ಶಿಕ್ಷಣ ಸಹಕಾರ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ನಿವೃತ್ತ ಶಿಕ್ಷಕರಾದ ಬಿ.ಬಿ.ಪಾಟೀಲ, ಟಿ.ಬಿ.ಉಪಾಧ್ಯೆ, ಬಿ.ಆರ್.ಜಟರ, ಬಿ.ಜೆ ಕುರುಂದವಾಡೆ, ಅಣ್ಣಪ್ಪ ಅಲಾಸೆ, ತುಕಾರಾಮ ಪರುತಗಲ್ಲೆ, ಅಕ್ಕಾತಾಯಿ ಮುಜಾವರ, ಜಿನ್ನಪ್ಪ ಮುರಗುಂಡೆ, ತೇಜಪಾಲ ಪಾಟೀಲ ಇತರರಿದ್ದರು. ಅಕಲಂಕ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಮಹಾವೀರ ಚಂದಗಡೆ ಪರಿಚಯಿಸಿದರು. ಸುನೀತಾ ಹೊನ್ನಪ್ಪನವರ, ಸುಜಾತಾ ಗಣೆ ನಿರೂಪಿಸಿದರು. ರೇವತಿ ಯಂದಗೌಡರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net