ಮತಕಳವು ಮುಚ್ಚಿಹಾಕಲು ತಿದ್ದುಪಡಿ

ಬೆಳಗಾವಿಯಲ್ಲಿ ಭಾನುವಾರ ನರೇಗಾ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ಕೈಗೊಂಡ ಉಪವಾಸ ಸತ್ಯಾಗ್ರಹದಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ಜಾಗೃತಿ ಪೋಸ್ಟರ್ ಬಿಡುಗಡೆಗೊಳಿಸಿದರು. ವಿಶ್ವಾಸ ವೈದ್ಯ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ರಾಹುಲ ಜಾರಕಿಹೊಳಿ, ಮೃಣಾಲ ಹೆಬ್ಬಾಳ್ಕರ್ ಇತರರಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ನರೇಗಾ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ಕೈಗೊಂಡ ಉಪವಾಸ ಸತ್ಯಾಗ್ರಹದಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ಜಾಗೃತಿ ಪೋಸ್ಟರ್ ಬಿಡುಗಡೆಗೊಳಿಸಿದರು. ವಿಶ್ವಾಸ ವೈದ್ಯ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ರಾಹುಲ ಜಾರಕಿಹೊಳಿ, ಮೃಣಾಲ ಹೆಬ್ಬಾಳ್ಕರ್ ಇತರರಿದ್ದಾರೆ.
Published on
ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಮತ ಕಳವು ಬಗ್ಗೆ ಧ್ವನಿ ಎತ್ತಿದ ಬಳಿಕ, ಅದು ದೇಶಾದ್ಯಂತ ಆಂದೋಲನ ಸ್ವರೂಪ ಪಡೆದುಕೊಂಡಿತ್ತು. ಇದರಿಂದ ಜನ ಜಾಗೃತರಾ ಗುತ್ತಾರೆಂದು ಹೆದರಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರ ದಿಕ್ಕು ತಪ್ಪಿಸುವುದಕ್ಕಾಗಿ ನರೇಗಾದಿಂದ ಗಾಂಧೀಜಿ ಹೆಸರು ತೆಗೆದು, ರಾಮನ ಹೆಸರು ಸೇರಿಸಿ ವಿವಾದ ಸೃಷ್ಟಿಸಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ಆರೋಪಿಸಿದರು.
ನರೇಗಾ ತಿದ್ದುಪಡಿ ಮಸೂದೆ ವಾಪಸ್ಸಿಗೆ ಆಗ್ರಹಿಸಿ ಇಲ್ಲಿನ ಕಾಂಗ್ರೆಸ್ ಭವನದ ಎದುರು ಭಾನುವಾರ ಏರ್ಪಡಿಸಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ಮತಕಳವು ಹಿಂದೆ ಬಿದ್ದಿದ್ದ ಜನರನ್ನು ಬೇರೆ ಕಡೆ ತಿರುಗಿಸಬೇಕಿತ್ತು. ಆ ಉದ್ದೇಶದಿಂದಲೇ ನರೇಗಾ ತಿದ್ದುಪಡಿ ಮಾಡಿದ್ದಾರೆ. ನಾವು ನರೇಗಾ ಜತೆಗೆ ಮತ ಕಳವು ಪ್ರಕರಣವೂ ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುತ್ತೇವೆ ಎಂದರು.
ಮಹಾತ್ಮ ಗಾಂಧೀಜಿ ಅವರನ್ನು ಮೊದಲು ನಾಥುರಾಮ್ ಗೋಡ್ಸೆ ಕೊಂದಿದ್ದ. ಈಗ ಆರ್‌ಎಸ್‌ಎಸ್‌ನವರು ಅಧಿಕಾರಕ್ಕೆ ಬಂದು ನರೇಗಾದಿಂದ ಗಾಂಧೀಜಿ ಹೆಸರು ತೆಗೆದು ಮತ್ತೊಮ್ಮೆ ಕೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಬಡವರ, ದೀನದಲಿತರ, ಅಸಹಾಯಕರ ಕಣ್ಣೀರು ಒರೆಸುವ ಕೆಲಸ ಮಾಡಿದ್ದರು. ಅದರ ಒಂದು ಭಾಗವೇ ಮನರೇಗಾ. ಇದನ್ನು ತೆಗೆದು ಹಾಕಲು ಬಿಜೆಪಿ ಮುಂದಾಗಿದ್ದು, ತಿದ್ದುಪಡಿ ವಾಪಸ್ಸು ಪಡೆಯುವವರೆಗೂ ಹೋರಾಟ ನಿಲ್ಲದು ಎಂದರು.
ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ, ಬಿಜೆಪಿಗರು ದೇವರನ್ನು ಸಂತೆಯಲ್ಲಿಟ್ಟು ಮಾರುವ ಕೆಲಸ ಮಾಡುತ್ತಿದ್ದಾರೆ. ನಾವು ಯಾವ ದೇವರನ್ನೂ ವಿರೋಧಿಸುವುದಿಲ್ಲ. ನಮಗೂ ದೇವರುಗಳು ಬೇಕು. ಆದರೆ ಬಿಜೆಪಿಗರು ದೇವರ ಹೆಸರಿನಲ್ಲಿ ಮಾಡುತ್ತಿರುವ ಈ ಮಾರ್ಕೆಟಿಂಗ್ ವಿರೋಧಿಸುತ್ತಿದ್ದೇವೆ ಎಂದರು.ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ, ಯುವ ಮುಖಂಡ ಮೃಣಾಲ ಹೆಬ್ಬಾಳ್ಕರ್, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಶ್ಯಾಮ ಘಾಟಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ವಾಕರಸಾ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧಾಕರ ಬಡಿಗೇರ, ಯುವರಾಜ ಕದಂ, ಮಂಜುನಾಥ ಎಚ್.ಭಣೆ, ಗಜಾನನ ಕಾಗನೇಕರ, ಕಾರ್ತಿಕ ಪಾಟೀಲ, ಅನಂತಕುಮಾರ ಬ್ಯಾಕೋಡ ಇತರರಿದ್ದರು.
"

ಯುಪಿಎ ಜಾರಿಗೆ ತಂದಿರುವ ಮನರೇಗಾದಿಂದ ಹಳ್ಳಿಗಳ ಅಭಿವೃದ್ಧಿಯಾಗಿದೆ. ಗ್ರಾಪಂಗಳಿಗೆ ಶಕ್ತಿ ಬಂದಿದೆ. ಗ್ರಾಮೀಣ ಕೂಲಿಕಾರರಿಗೆ ಅನುಕೂಲವಾಗಿರುವ ಈ ಯೋಜನೆಯ ತಿದ್ದುಪಡಿ ಮಾಡಿರುವ ಬಗ್ಗೆ ನ್ಯಾಯ ಸಿಗೋವರೆಗೂ ಹೋರಾಟ ಮಾಡುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net