ರಾಜ್ಯದಲ್ಲಿಯೇ ಮೊದಲ ಬಾರಿ ಬೆಳಗಾವಿ ಜಿಲ್ಲಾದ್ಯಂತ ನಗರಗಳು ಹಾಗೂ ಗ್ರಾಮಗಳ ರಸ್ತೆ, ಹೆದ್ದಾರಿ, ಪ್ರಮುಖ ವೃತ್ತಗಳು, ಸಾರ್ವಜನಿಕ ಸ್ಥಳಗಳು ಮತ್ತು ಸಂಚಾರ ಸಿಕ್ಕು ಹೆಚ್ಚಿರುವ ಪ್ರದೇಶಗಳು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ಗಳಲ್ಲಿ ಪ್ರಾಯೋಗಿಕವಾಗಿ 260 ಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಲು ಕ್ರಮವಹಿಸಲಾಗಿದೆ. ಅಪರಾಧ ನಿಯಂತ್ರಣಕ್ಕೆ ತಂತ್ರಜ್ಞಾನ ಆಧಾರಿತ ನಿಗಾವ್ಯವಸ್ಥೆ ಹೊಸ ಅಧ್ಯಾಯಕ್ಕೆ ನಾಂದಿಹಾಡಿದೆ.