ಹಳ್ಳಿಗಳಿಗೂ ಎಐ ಕ್ಯಾಮರಾ ಕಣ್ಗಾವಲು

ಬಾಗಲಕೋಟೆ-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆ.ಚಂದರಗಿ ಕ್ರೀಡಾ ಶಾಲೆ ವೃತ್ತದಲ್ಲಿ ಅಳವಡಿಸಿರುವ ಎಐ ಕ್ಯಾಮರಾ.
ಬಾಗಲಕೋಟೆ-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆ.ಚಂದರಗಿ ಕ್ರೀಡಾ ಶಾಲೆ ವೃತ್ತದಲ್ಲಿ ಅಳವಡಿಸಿರುವ ಎಐ ಕ್ಯಾಮರಾ.
Published on
ಕಟಕೋಳ: ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸದುದ್ದೇಶದಿಂದ ಪೊಲೀಸ್ ಇಲಾಖೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಷ್ಟೇ ಅಲ್ಲದೆ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಎಐ (ಕೃತಕ ಬುದ್ಧಿಮತ್ತೆ) ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ.
ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಕಟಕೋಳ ಸಮೀಪದ ಕೆ.ಚಂದರಗಿ ಗ್ರಾಮದಲ್ಲಿ ಎಐ ಕ್ಯಾಮರಾ ಅಳವಡಿಸಲಾಗಿದೆ. ಪರಿಣಾಮ ನಿತ್ಯ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ದ್ವಿಚಕ್ರ ಹಾಗೂ ಸೀಟ್ ಬೆಲ್ಟ್ ಧರಿಸದ ವಾಹನ ಸವಾರರು ನಿಯಮ ಪಾಲಿಸುವಂತೆ ಮಾಡಿದೆ.
ಗ್ರಾಮದ ಪ್ರಮುಖ ಪ್ರವೇಶ-ನಿರ್ಗಮನ ಸ್ಥಳ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಕ್ಯಾಮರಾ ವಾಹನಗಳ ಸಂಚಾರ ಸೇರಿದಂತೆ ವಿವಿಧ ಚಟುವಟಿಕೆ ಮೇಲೆ ನಿಗಾ ಇಡಲು ಸಹಕಾರಿಯಾಗಲಿವೆ.

ಕ್ಯಾಮರಾ ನಿರಂತರ ನಿಗಾದಿಂದ ಕಳ್ಳತನ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳುವ ಜತೆಗೆ ಅಹಿತಕರ ಘಟನೆ ಕುರಿತಾದ ದೃಶ್ಯಾವಳಿ ಪಡೆಯಲು ಅನುಕೂಲವಾಗಲಿದೆ. ಪೊಲೀಸ್ ಇಲಾಖೆಯ ಈ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net