ಜಂಬಗಿ ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ

ಬೆಳಗಾವಿಯ ಹೊನಗಾದಲ್ಲಿನ ಗುರುದೇವ ಜಂಬಗಿ ಪಿಯು ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಈಚೆಗೆ ಸನ್ಮಾನಿಸಲಾಯಿತು. ಡಾ.ಅಮೋಘ ಜಂಬಗಿ, ಡಾ.ಜಗದೀಶ ಸೂರಣ್ಣವರ, ಅಖಿಲಕುಮಾರ ಹಲಗತ್ತಿ, ಮಹಾಲಿಂಗ ಕಮತಗಿ, ಪ್ರವೀಣ ಚಾಂದಿಲ್ಕರ ಇತರರಿದ್ದರು.

Published on
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಆಸ್ಪತ್ರೆ ಮುಖ್ಯಸ್ಥ ಡಾ.ಅಮೋಘ ಜಂಬಗಿ ವಿದ್ಯಾರ್ಥಿಗಳಿಗಾಗಿ ತಯಾರಿಸಿದ ‘ವಿದ್ಯಾರ್ಥಿ ಮಿತ್ರ’ ಆ್ಯಪ್ ಅನಾವರಣಗೊಳಿಸಿ, ವಿದ್ಯಾರ್ಥಿಗಳ ಸಾಧನೆ ಶ್ಲಾಘಿಸಿದರು. ಹಿರಿಯ ವೈದ್ಯ ಡಾ.ಜಗದೀಶ ಸೂರಣ್ಣವರ ಮಾತನಾಡಿ, ಸಾಧನೆ ಸಾಧಕರ ಸ್ವತ್ತು, ಸೋಮಾರಿಗಳ ಸ್ವತ್ತಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುರುದೇವ ಸಂಸ್ಥೆಯ ನಿರ್ದೇಶಕ ಅಖಿಲಕುಮಾರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕರಿಸಿದ ಎಲ್ಲ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು. ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕಿಂತಲೂ ಪಿಯುಸಿ ಫಲಿತಾಂಶ ಉನ್ನತೀಕರಿಸಿದ ವಿದ್ಯಾರ್ಥಿಗಳ ಸಾಧನೆ ಶ್ಲಾಘಿಸಿದರು.
ವಿಭಾಗೀಯ ಮುಖಸ್ಥ ಮಹಾಲಿಂಗ ಕಮತಗಿ, ಪ್ರಾಚಾರ್ಯ ಪ್ರವೀಣ ಚಾಂದಿಲ್ಕರ್, ಆಡಳಿತಾಧಿಕಾರಿ ಬಸವರಾಜ ತುಬಾಕಿ, ರಾಜು ಹೈಬತ್ತಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಪಾಲಕರಿದ್ದರು. ಆರತಿ ಬಿ. ಸ್ವಾಗತಿಸಿದರು. ಅಫ್ರೀನ್ ಖಾನ್ ನಿರೂಪಿಸಿದರು. ಮಹೇಶ ಕಲ್ಲೊಳ್ಳಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net