ಜಿಲ್ಲಾಮಟ್ಟದ ಹ್ಯಾಂಡಬಾಲ್ ಸ್ಪರ್ಧೆಯಲ್ಲಿ ಸಾಧನೆ

ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಥಣಿ ಜೆ.ಎ.ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಎಂ.ಪಿ.ಮೇತ್ರಿ, ಪ್ರಕಾಶ ನರಗಟ್ಟಿ, ಎಂ.ಎಸ್.ಚನಗೊಂಡ, ಎನ್.ಚಂದ್ರಶೇಖರ,  ಎಸ್.ಆರ್.ಪಾಟೀಲ ಇತರರಿದ್ದರು.
ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಥಣಿ ಜೆ.ಎ.ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಎಂ.ಪಿ.ಮೇತ್ರಿ, ಪ್ರಕಾಶ ನರಗಟ್ಟಿ, ಎಂ.ಎಸ್.ಚನಗೊಂಡ, ಎನ್.ಚಂದ್ರಶೇಖರ, ಎಸ್.ಆರ್.ಪಾಟೀಲ ಇತರರಿದ್ದರು.
Published on: 
ಅಥಣಿ: ಮೂಡಲಗಿಯ ಶ್ರೀ ಶಿವಬೋಧರಂಗ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿಪೂರ್ವ ವಿಭಾಗದ ಜಿಲ್ಲಾಮಟ್ಟದ ಬಾಲಕ, ಬಾಲಕಿಯರ ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ಅಥಣಿಯ ಜೆ.ಎ.ಪದವಿಪೂರ್ವ ಮಹಾವಿದ್ಯಾಲಯದ ಬಾಲಕ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂದೀಪ ಸಂಗೊರಾಮ, ಕಾರ್ಯದರ್ಶಿ ಎಸ್.ವಿ.ಜೋಶಿ, ಪ್ರಾಚಾರ್ಯ ಎಂ.ಪಿ.ಮೇತ್ರಿ, ಪ್ರಕಾಶ ನರಗಟ್ಟಿ, ಎಂ.ಎಸ್.ಚನಗೊಂಡ, ಎನ್.ಚಂದ್ರಶೇಖರ, ಎಸ್.ಆರ್.ಪಾಟೀಲ, ಬಿ.ಎಸ್.ಲೋಕೂರ, ಪ್ರಮೋದ ಪವಾರದೇಸಾಯಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.