ಬೈಕ್ ಅಪಘಾತದಲ್ಲಿ ವ್ಯಕ್ತಿ ಸಾವು

ಬೈಕ್ ಅಪಘಾತ
ಬೈಕ್ ಅಪಘಾತ
Published on

ಪ್ರಮುಖ ಮುಖ್ಯಾಂಶಗಳು

  • ಬೈಕ್ ಅಪಘಾತದಲ್ಲಿ ಸವಾರ ಸಾವು
  • ಖಾನಾಪುರ ತಾಲೂಕಿನ ನಾಗರಗಾಳಿ ಕ್ರಾಸ್ ದಲ್ಲಿ ಘಟನೆ
  • ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಿವಾಸಿ ಮೃತ
ಬೈಕ್ ಅಪಘಾತ: ಸವಾರ ಸಾವು
ಬೆಳಗಾವಿ : ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಸಿಮೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ರಾಮನಗರ ನಿವಾಸಿ ದಿಗಂಬರ ಪಾಂಡುರಂಗ ಗಾವಡೆ( 27) ಬೈಕ್ ಸವಾರ ಸಾವಿಗಿಡಾದ ಘಟನೆ ಜಿಲ್ಲೆಯ ಖಾನಾಪೂರ ತಾಲೂಕಿನ ನಾಗರಗಾಳಿ ಗ್ರಾಮದ ಬಳಿ ರಾಮನಗರ ಅಳ್ನಾವರ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಮೃತ ಬೈಕ್ ಸವಾರ ರಾಮನಗರ ಕಡೆಯಿಂದ ಅಳ್ನಾವರ ಕಡೆಗೆ ಸಾಗುತ್ತಿದ್ದ ವೇಳೆ ನಾಗರಗಾಳಿ ಕ್ರಾಸ್ ನಲ್ಲಿ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಸಿಮೆಂಟ್ ಕಂಬಕ್ಕೆ ಡಿಕ್ಕಿಯಾಗಿ ಸವಾರನು ಕಂದಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತನಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡ ಖಾನಾಪೂರ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net