ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

ಪಾಲಭಾಂವಿಯಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ರಾಯಬಾಗ ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾವೀರ ಜೀರಗ್ಯಾಳ ಅವರನ್ನು ಸನ್ಮಾನಿಸಲಾಯಿತು. ಎ.ಜಿ.ಬಾದಾಮಿ, ಬಸವರಾಜ ಅಂದಾನಿ, ಅಣ್ಣಾಸಾಬಗೌಡ ನಾಯಿಕ ಪಾಟೀಲ, ಮಹಾಂತೇಶ ಬಡಿಗೇರ ಇತರರಿದ್ದರು.
ಪಾಲಭಾಂವಿಯಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ರಾಯಬಾಗ ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾವೀರ ಜೀರಗ್ಯಾಳ ಅವರನ್ನು ಸನ್ಮಾನಿಸಲಾಯಿತು. ಎ.ಜಿ.ಬಾದಾಮಿ, ಬಸವರಾಜ ಅಂದಾನಿ, ಅಣ್ಣಾಸಾಬಗೌಡ ನಾಯಿಕ ಪಾಟೀಲ, ಮಹಾಂತೇಶ ಬಡಿಗೇರ ಇತರರಿದ್ದರು.
Published on

ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಯಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ರಾಯಬಾಗ ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾವೀರ ಜೀರಗ್ಯಾಳ ಹೇಳಿದರು.

ಸಮೀಪದ ಪಾಲಭಾಂವಿ ಎಂ.ಎನ್.ನಾಯಿಕ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಹಾರೈಸಿದರು.
ಪ್ರೌಢಶಾಲೆ ಮುಖ್ಯಶಿಕ್ಷಕ ಎ.ಜಿ.ಬಾದಾಮಿ ಹಾಗೂ ಶಿಕ್ಷಕ ಟಿ.ಜಿ.ದಾಸಪ್ಪನವರ ಮಾತನಾಡಿದರು. ಹಾಕಿ ಮಾಂತ್ರಿಕ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಎಂ.ಬಿ.ಬಡಿಗೇರ ಪೂಜೆ ಸಲ್ಲಿಸಿದರು. ಭೂದಾನಿ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ತಾತ್ಯಾಸಾಬಗೌಡ ನಾಯಿಕ ಪಾಟೀಲ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿ ಬರಮಾಡಿಕೊಂಡರು.
ರಾಯಬಾಗ ದೈಹಿಕ ಶಿಕ್ಷಣ ಪರೀಕ್ಷಕ ಮಹಾವೀರ ಜೀರಗ್ಯಾಳೆ, ಪದನ್ನೋತಿ ಹೊಂದಿದ ಶಿಕ್ಷಕ ಅಶೋಕ ಗಸ್ತಿ ಹಾಗೂ ನಿವೃತ್ತ ಶಿಕ್ಷಕರಾದ ಪಿ.ಎಂ.ದಿವಾಕರ, ಮುಖ್ಯಶಿಕ್ಷಕಿ ಜಯಶ್ರೀ ಪತ್ತಾರ ಅವರನ್ನು ಸನ್ಮಾನಿಸಲಾಯಿತು.

ಆರ್.ಆರ್.ಬಿಸನಕೊಪ್ಪ, ಸಿ.ಎಸ್.ಹಿರೇಮಠ, ಧರೆಪ್ಪ ಬ್ಯಾಕೋಡ, ಸಿ.ಬಿ.ಭೋಜನ್ನವರ, ಮಹಾಂತೇಶ ಬಡಿಗೇರ, ಬಿ.ಬಿ.ಬಂಡಿಗಣಿ, ಜಯಶ್ರೀ ಕಂಬಾರ, ಎಸ್.ಜಿ.ತುಪ್ಪದ, ಶಿಕ್ಷಕ ಪಿ.ಎ.ಕೂಡಲಗಿ, ಸಾಗರ ಬಾಪುರೆ, ದುಂಡಪ್ಪ ಕಾಗವಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net