ಮಹಿಳೆ ಶಕ್ತಿ, ಸಹನೆ, ಮೌಲ್ಯಗಳ ಪ್ರತೀಕ

ಬೆಳಗಾವಿ ನಗರದ ಮಹಾಂತ ಭವನದಲ್ಲಿ ಬುಧವಾರ ಅಂಜನಾ ಮಹಿಳಾ ಮಂಡಳದ ವಾರ್ಷಿಕೋತ್ಸವವನ್ನು ಡಾ.ವಿಜಯಲಕ್ಷ್ಮೀ ಪುಟ್ಟಿ ಉದ್ಘಾಟಿಸಿದರು. ಭಾಗ್ಯಶ್ರೀ ಭೈರಪ್ಪನವರ, ವಿಜಯಲಕ್ಷ್ಮೀ ಪಾಟೀಲ ಇತರರಿದ್ದರು.
ಬೆಳಗಾವಿ ನಗರದ ಮಹಾಂತ ಭವನದಲ್ಲಿ ಬುಧವಾರ ಅಂಜನಾ ಮಹಿಳಾ ಮಂಡಳದ ವಾರ್ಷಿಕೋತ್ಸವವನ್ನು ಡಾ.ವಿಜಯಲಕ್ಷ್ಮೀ ಪುಟ್ಟಿ ಉದ್ಘಾಟಿಸಿದರು. ಭಾಗ್ಯಶ್ರೀ ಭೈರಪ್ಪನವರ, ವಿಜಯಲಕ್ಷ್ಮೀ ಪಾಟೀಲ ಇತರರಿದ್ದರು.
Published on
ಬೆಳಗಾವಿ: ಮಹಿಳೆಯರು ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಸವಲತ್ತು ಪಡೆದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಬೇಕು. ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಾಹಿತಿ ಡಾ.ವಿಜಯಲಕ್ಷ್ಮೀ ಪುಟ್ಟಿ ಹೇಳಿದರು. ನಗರದ ಮಹಾಂತ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಜನಾ ಮಹಿಳಾ ಮಂಡಳದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಹಿಳೆ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಶಕ್ತಿ, ಸಹನೆ ಮತ್ತು ಮೌಲ್ಯಗಳ ಪ್ರತೀಕ. ಮನೆ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅವಿಭಾಜ್ಯ ಅಂಗವಾಗಿರುವ ಮಹಿಳೆ ಇಂದು ಶಿಕ್ಷಣ, ಉದ್ಯೋಗ, ಆಡಳಿತ, ಕೃಷಿ, ಕಲೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾಳೆ ಎಂದರು. ಮಂಡಳದ ಅಧ್ಯಕ್ಷೆ ಭಾಗ್ಯಶ್ರೀ ಭೈರಪ್ಪನವರ, ಕಾರ್ಯದರ್ಶಿ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷೆ ಲಲಿತಾ ಹೂಗಾರ, ಸಹ ಕಾರ್ಯದರ್ಶಿ ಪ್ರಭಾ ಪಾಟೀಲ, ಖಜಾಂಚಿ ಜಯಶ್ರೀ ದುಗ್ಗಾಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net