ಕಬ್ಬು ಸಾಗಿಸುತ್ತಿದ್ದಾಗ ಟ್ರಾಲಿಗೆ ಬೆಂಕಿ

ಟ್ರಾಲಿಗೆ ಬೆಂಕಿ
ಟ್ರಾಲಿಗೆ ಬೆಂಕಿ
Published on
ಹಂದಿಗುಂದ: ಗ್ರಾಮದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿದ ಘಟನೆ ಮಂಗಳವಾರ ನಡೆದಿದೆ. ನಾಗಪ್ಪ ಪೂಜಾರಿ ಅವರ 20 ಟನ್ ಕಬ್ಬು ಸಾಗಿಸಲಾಗುತ್ತಿತ್ತು.
ಕಬ್ಬಿನ ಗ್ಯಾಂಗಿನ ಯುವಕರು ಹಾಗೂ ಸಮೀರವಾಡಿ ಸಕ್ಕರೆ ಕಾರ್ಖಾನೆ ಫೈಯರ್ ಸರ್ವಿಸ್ ವಾಹನ ಬಂದು ಬೆಂಕಿ ನಂದಿಸಿದ್ದರಿಂದ ಅನಾಹುತ ತಪ್ಪಿದೆ. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net