ನಿರಾಶ್ರಿತರ ಸಮಸ್ಯೆಗೆ ಶೀಘ್ರ ಪರಿಹಾರ

ಕುಡಚಿಯಲ್ಲಿ ಕೃಷ್ಣಾ ನದಿ ಪ್ರವಾಹ ನಿರಾಶ್ರಿತರ ಕಾಲನಿಗೆ ಸಚಿವ ಜಮೀರ್ ಅಹ್ಮದಖಾನ್ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಸಚಿವ ಸತೀಶ ಜಾರಕಿಹೊಳಿ, ಸಚಿನ ಪೂಜಾರಿ ಇತರರು ಇದ್ದರು.
ಕುಡಚಿಯಲ್ಲಿ ಕೃಷ್ಣಾ ನದಿ ಪ್ರವಾಹ ನಿರಾಶ್ರಿತರ ಕಾಲನಿಗೆ ಸಚಿವ ಜಮೀರ್ ಅಹ್ಮದಖಾನ್ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಸಚಿವ ಸತೀಶ ಜಾರಕಿಹೊಳಿ, ಸಚಿನ ಪೂಜಾರಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಜಮೀರ್ ಅಹ್ಮದಖಾನ್ ಭರವಸೆ
  • ಮಸೀದಿಗಳಿಗೆ ಅನುದಾನ
ಕುಡಚಿ: ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಮಹೇಂದ್ರ ತಮ್ಮಣ್ಣವರ ಜತೆಗೂಡಿ ಮಾರ್ಚ್ ತಿಂಗಳಲ್ಲಿ ೫೮೦ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಿ ಕೃಷ್ಣಾ ನದಿ ಪ್ರವಾಹ ನಿರಾಶ್ರಿತ ಲಾನುಭವಿಗಳಿಗೆ ಶೀಘ್ರ ಮನೆ ಮಂಜೂರಾತಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಸಚಿವ ಜಮೀರ್ ಅಹ್ಮದಖಾನ್ ಹೇಳಿದರು.
ಪಟ್ಟಣದ ಕುಡಚಿ-ಜಮಖಂಡಿ ರಸ್ತೆ ಪಕ್ಕದಲ್ಲಿರುವ ೨೦೦೫-೦೬ನೇ ಸಾಲಿನ ಕೃಷ್ಣಾ ನದಿ ಪ್ರವಾಹ ನಿರಾಶ್ರಿತರ ಕಾಲನಿಗೆ ಶುಕ್ರವಾರ ಭೇಟಿ ನೀಡಿ ಅಲ್ಲಿಯ ಜನರ ಕುಂದು-ಕೊರತೆ ಆಲಿಸಿ ಮಾತನಾಡಿ, ಪಟ್ಟಣದ ದರ್ಗಾ ಅಭಿವೃದ್ಧಿಗೆ ಈಗಾಗಲೇ ೨ ಕೋಟಿ ರೂ. ನೀಡಲಾಗಿದೆ. ಮಸೀದಿಗಳ ಜೀರ್ಣೋದ್ಧಾರಕ್ಕೆ ೧.೬೦ ಕೋಟಿ ರೂ. ಮಂಜೂರಾತಿ ಆದೇಶಪತ್ರ ನೀಡಲಾಗಿದೆ. ಇಲ್ಲಿಯವರೆಗೆ ಕುಡಚಿ ಪಟ್ಟಣಕ್ಕೆ ಒಟ್ಟು ೩.೬೦ ಕೋಟಿ ರೂ. ಅನುದಾನ ನೀಡಿದ್ದೇವೆ. ನಿರಾಶ್ರಿತ ಸಮಸ್ಯೆ ಸರಿಪಡಿಸುವೆ ಎಂದರು.
ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಕೃಷ್ಣಾ ನದಿ ಪ್ರವಾಹದಲ್ಲಿ ಮನೆ ಹಾಗೂ ನಿವೇಶನ ಕಳೆದುಕೊಂಡು ಸಂಕಷ್ಟದಲ್ಲಿರುವ ಜನರ ಸಮಸ್ಯೆ ಬಗೆಹರಿಸಬೇಕೆಂದು ಹಲವು ಬಾರಿ ಸಚಿವ ಜಮೀರ್ ಅವರ ಗಮನಕ್ಕೆ ತರಲಾಗಿದೆ. ಈ ನಿಟ್ಟಿನಲ್ಲಿ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ ಎಂದರು.
ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ಶಂಕರ, ಅಲ್ಪಸಂಖ್ಯಾತ ಜಿಲ್ಲಾ ಘಟಕ ಸಂಚಾಲಕ ಅಮೀನ್ ಜಾತಗಾರ್, ಯುವ ಮುಖಂಡ ಅಮಿತ್ ಘಾಟಗೆ, ದುರಗಪ್ಪ ದಂಡಿನವರ, ಸಂಜಯಕುಮಾರ ತಳವಳಕರ, ಸಚಿನ ಪೂಜಾರಿ, ಕುತುಬುದ್ದೀನ್ ಮುಜಾವರ್, ಪ್ರಶಾಂತ ಕಾಂಬಳೆ, ಪ್ರಸಾದ ಶಿಂಗೆ, ಫಾತೀಮಾ ಶೇಖ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net