ತಾಳ್ಮೆ ಪರೀಕ್ಷಿಸುತ್ತಿರುವ ಕೌಜಲಗಿ

ಬೈಲಹೊಂಗಲದಲ್ಲಿ ಹಮ್ಮಿಕೊಂಡಿರುವ ಧರಣಿಗೆ ಪುಟ್ಯಕೋಟಿ ಯುವಕ ಸಂಘದ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಮಂಜುನಾಥ ಮರಿಶೆಟ್ಟಿ, ನಾಗಪ್ಪ ಸಂಗೊಳ್ಳಿ, ಬಸವರಾಜ ನೇಸರಗಿ, ಬಿ.ಎಂ.ಚಿಕ್ಕನಗೌಡರ, ಬೀರಪ್ಪ ದೇಶನೂರ ಇದ್ದರು.
ಬೈಲಹೊಂಗಲದಲ್ಲಿ ಹಮ್ಮಿಕೊಂಡಿರುವ ಧರಣಿಗೆ ಪುಟ್ಯಕೋಟಿ ಯುವಕ ಸಂಘದ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಮಂಜುನಾಥ ಮರಿಶೆಟ್ಟಿ, ನಾಗಪ್ಪ ಸಂಗೊಳ್ಳಿ, ಬಸವರಾಜ ನೇಸರಗಿ, ಬಿ.ಎಂ.ಚಿಕ್ಕನಗೌಡರ, ಬೀರಪ್ಪ ದೇಶನೂರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ವಿಶ್ವನಾಥ ಪಾಟೀಲ ಆಕ್ರೋಶ
  • ಚನ್ನಮ್ಮಾಜಿ ರಾಕ್ ಗಾರ್ಡನ್ ನಿರ್ಮಿಸಲಿ
ಬೈಲಹೊಂಗಲ: ಸರ್ಕಾರ ಮತ್ತು ಶಾಸಕ ಮಹಾಂತೇಶ ಕೌಜಲಗಿ ಹೋರಾಟಗಾರರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಇವರು ಜನಸೇವೆಗಾಗಿ ಆಯ್ಕೆಯಾಗಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ವೀರರಾಣಿ ಕಿತ್ತೂರು ಚನ್ನಮ್ಮಾಜಿ ಅಭಿವದ್ಧಿ ಪ್ರಾಧಿಕಾರಕ್ಕೆ 200 ಕೋಟಿ ರೂ. ಅನುದಾನ ಹಾಗೂ ಚನ್ನಮ್ಮಾಜಿ ಸಮಾಧಿ ಸ್ಥಳದ ಮರು ಉದ್ಘಾಟನೆಗೆ ಆಗ್ರಹಿಸಿ ನಗರದ ರಾಯಣ್ಣ ವತ್ತದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ 9 ದಿನ ಪೂರೈಸಿದ ಹಿನ್ನಲೆಯಲ್ಲಿ ಮಾತನಾಡಿದ ಅವರು, ಪ್ರತಿ ದಿನ ಕ್ಷೇತ್ರದ ವಿವಿಧ ಗ್ರಾಮಗಳ ನೂರಾರು ಜನರು ಧರಣಿ ಸ್ಥಳಕ್ಕೆ ಬೆಂಬಲ ನೀಡಿ, ಸತ್ಯಾಗ್ರಹದಲ್ಲಿ ಪಾಲ್ಗೊಂಡು ಶಾಸಕರ ನಡೆ ಖಂಡಿಸುತ್ತಿದ್ದಾರೆ. ಆದರೆ, ಶಾಸಕರು ತಮ್ಮ ಕ್ಷೇತ್ರದ ಜನರಿಗೆ ಉತ್ತರ ನೀಡದೆ ಚನ್ನಮ್ಮಾಜಿಯನ್ನು ಅವಮಾನಿಸುತ್ತಿದ್ದಾರೆ. ಶಾಸಕರಿಗೆ ಹೋರಾಟಗಾರರನ್ನು ಭೆಟಿಯಾಗಲು ಸಮಯವಿಲ್ಲವೇ ಅಥವಾ ಧೈರ್ಯವಿಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇಂತಹ ಶಾಸಕರಿಗೆ ಪಕ್ಷಾತೀತವಾಗಿ ಮುಂದಿನ ದಿನಗಳಲ್ಲಿ ಜನತೆ ಪಾಠ ಕಲಿಸುವುದು ಖಚಿತ ಎಂದರು.
ಮಂಗಳವಾರ ಧರಣಿಯಲ್ಲಿ ಪುಟ್ಯಕೋಟಿ ಯುವಕ ಸಂಘದ ಬೆಂಬಲ ನೀಡಿ ಶಾಸಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಯುವಕ ಸಂಘದ ಮಂಜುನಾಥ ಮರಿಶೆಟ್ಟಿ, ನಾಗಪ್ಪ ಸಂಗೊಳ್ಳಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರ ಮಾತೆ ಕಿತ್ತೂರು ಚನ್ನಮ್ಮಾಜಿ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿಸಲು ಸರ್ಕಾರ ಕ್ರಮವಹಿಸಬೇಕು. ಚನ್ನಮ್ಮನ ಹೆಸರಿನಲ್ಲಿ ರಾಷ್ಟ್ರಮಟ್ಟದ ಸೈನಿಕ ಶಾಲೆ ಹಾಗೂ ಚನ್ನಮ್ಮಾಜಿ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ನಿರ್ಮಿಸಬೇಕು, ಬೈಲಹೊಂಗಲದಲ್ಲಿ ಚನ್ನಮ್ಮ ಸೆರೆವಾಸ ಅನುಭವಿಸಿದ ಜಾಗವನ್ನು ಅಭಿವದ್ಧಿಪಡಿಸಬೇಕು. ಚನ್ನಮ್ಮಾಜಿ ನವೀಕತ ಸಮಾಧಿ ಸ್ಥಳವನ್ನು ಭವ್ಯ ಸಮಾರಂಭ ಏರ್ಪಡಿಸಿ ಅದ್ದೂರಿಯಾಗಿ ಉದ್ಘಾಟಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಬಿಜೆಪಿ ನಿಕಟಪೂರ್ವ ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ ಮಾತನಾಡಿ, ಮುಂದಿನ ಹೋರಾಟದ ರೂಪರೇಷೆಗಳನ್ನು ಉಗ್ರ ರೂಪ ಪಡೆದುಕೊಳ್ಳುವ ಮುಂಚೆ ಸರಕಾರ ಎಚ್ಚೆತ್ತು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ಬಸವರಾಜ ನೇಸರಗಿ, ಬಿ.ಎಂ.ಚಿಕ್ಕನಗೌಡರ, ಬೀರಪ್ಪ ದೇಶನೂರ, ಅಪ್ಪಾಸಾಹೇಬ ಲಕ್ಕುಂಡಿ, ಮಲ್ಲಿಕಾರ್ಜುನ ಹುಂಬಿ, ಅಶೋಕ ಮತ್ತಿಕೊಪ್ಪ, ನ್ಯಾಯವಾದಿ ದುಂಡೇಶ ಗರಗದ, ಅಶೋಕ ತುರಮರಿ, ದುಂಡಯ್ಯ ಕುಲಕರ್ಣಿ, ವೀರನಗೌಡ ದೊಡ್ಡವೀರಪ್ಪನವರ, ರಿತೇಶ ಪಾಟೀಲ, ಕಿರಣಕುಮಾರ ಬೆಳಗಾವಿಮಠ,
ಈಶ್ವರ ಮುರಕೀಭಾವಿ, ಗುರುಶಾಂತ ನೇಸರಗಿ, ಮಲ್ಲಿಕಾರ್ಜುನ ತೇಗೂರ, ಪತ್ರಯ್ಯ ಕಾರಿಮನಿ, ಬಸವರಾಜ ನಾಗೊರಿ, ಶಂಕರ ನಂದೀಶ್ವರ, ಸುರೇಶ ಹೊಳಿ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net