ಸವದತ್ತಿಯಲ್ಲಿ ಅದ್ದೂರಿ ತಿರಂಗಾ ಯಾತ್ರೆ

ಸವದತ್ತಿಯಲ್ಲಿ ತಿರಂಗಾ ಯಾತ್ರೆಯಲ್ಲಿ ವಿರೂಪಾಕ್ಷ ಮಾಮನಿ, ಬಾಳಪ್ಪ ಮಡಿವಾಳರ, ಶ್ರೇಯಸ್ ಮಾಮನಿ, ಬಾಳಪ್ಪ ಮಡಿವಾಳರ ಹಾಗೂ ಕಾರ್ಯಕರ್ತರು ಇದ್ದರು.
ಸವದತ್ತಿಯಲ್ಲಿ ತಿರಂಗಾ ಯಾತ್ರೆಯಲ್ಲಿ ವಿರೂಪಾಕ್ಷ ಮಾಮನಿ, ಬಾಳಪ್ಪ ಮಡಿವಾಳರ, ಶ್ರೇಯಸ್ ಮಾಮನಿ, ಬಾಳಪ್ಪ ಮಡಿವಾಳರ ಹಾಗೂ ಕಾರ್ಯಕರ್ತರು ಇದ್ದರು.
Published on

ಸ್ವಾತಂತ್ರ್ಯ ದಿನಾಚರಣೆ ಹಾಗೂ ವಂದೇ ಮಾತರಂ ಗೀತೆಯ 150ನೇ ವರ್ಷದ ಸಂಭ್ರಮದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಗುರುವಾರ ನಗರದಲ್ಲಿ 350 ಮೀ. ಉದ್ದದ ಬೃಹತ್ ತ್ರಿವರ್ಣ ಧ್ವಜದೊಂದಿಗೆ ತಿರಂಗಾ ಯಾತ್ರೆ ನಡೆಯಿತು.

ಕೆಎಲ್‌ಇ ಸಂಸ್ಥೆಯ ಎಸ್.ಕೆ. ಹೈಸ್ಕೂಲ್ ಮೈದಾನದಿಂದ ಆರಂಭವಾದ ಯಾತ್ರೆಯಲ್ಲಿ ವಿವಿಧ ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡರು. ತ್ರಿವರ್ಣ ಧ್ವಜ ಹಿಡಿದು ಶಿಸ್ತುಬದ್ಧವಾಗಿ ಸಾಗಿದ ವಿದ್ಯಾರ್ಥಿಗಳು ದೇಶಭಕ್ತಿ ಘೋಷಣೆಗಳ ಮೂಲಕ ನಗರದಾದ್ಯಂತ ರಾಷ್ಟ್ರಾಭಿಮಾನದ ವಾತಾವರಣ ನಿರ್ಮಿಸಿದರು.
ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ, ಬಾಳಪ್ಪ ಮಡಿವಾಳರ, ಮಲ್ಲಿಕಾರ್ಜುನ ಬೀಳಗಿ, ಗಿರೀಶ ಬೀಳಗಿ, ಶ್ರೇಯಸ್ ಮಾಮನಿ, ಕುಮಾರಸ್ವಾಮಿ ತಲ್ಲೂರಮಠ, ಬಸವರಾಜ ಇಂಚಲ, ದುಂಡಯ್ಯ ರಾಮಡಿಮಠ, ಬಾಬು ಕಡಕೋಳ, ಸೋಮು ಹದ್ಲಿ, ರವಿ ಬ್ಯಾಹಟ್ಟಿ, ಉದಯ ಹೂಗಾರ, ವಿನೋದ ಚಿನಗುಡಿ, ರಾಜು ಸಾಲಿಮಠ, ಸಂತೋಷ ಹೊಂಗಲ, ವಿಭಾಗ ಸಂಘಟನಾ ಕಾರ್ಯದರ್ಶಿ ಸಚಿನ ಹಿರೇಮಠ, ವಿಭಾಗ ಸಂಚಾಲಕ ಶಿವಯ್ಯ ಮಠಪತಿ, ಜಿಲ್ಲಾ ಸಂಚಾಲಕ ಮಹಾಂತೇಶ ಹಂಪಿಹೊಳಿ, ದರ್ಶನ ಮಾಶನವರ, ರಾಹುಲ, ಶಶಾಂಕ, ನಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net