ಸಮನ್ವಯ ವೃದ್ಧಿಸುವ ಜಾತ್ರೋತ್ಸವ

ಯಡೂರ ಗ್ರಾಮದಲ್ಲಿ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಇತರರಿದ್ದರು.
ಯಡೂರ ಗ್ರಾಮದಲ್ಲಿ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಶಿ ಪೀಠದ ಜಗದ್ಗುರು ಅಭಿಮತ
  • ಬೆಳ್ಳಿ ರಥೋತ್ಸವಕ್ಕೆ ಚಾಲನೆ
ಮಾಂಜರಿ: ಸಾಮಾಜಿಕ ವ್ಯವಸ್ಥೆ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಮಠ-ಮಂದಿರಗಳ ಮಹಾರಥೋತ್ಸವ ನೆರವೇರುತ್ತವೆ ಎಂದು ಕಾಶಿ ಪೀಠದ ಜಗದ್ಗುರು ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.
ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ವೀರಭದ್ರ ದೇವಸ್ಥಾನ ಹಾಗೂ ಕಾಡದೇವರ ಮಠದ ಆಶ್ರಯದಲ್ಲಿ ಆಯೋಜಿಸಿದ್ದ ಕುಂಭ ಮೆರವಣಿಗೆ, ರಾಜಗೋಪುರ ಲೋಕಾರ್ಪಣೆ, ಲಕ್ಷ ದೀಪೋತ್ಸವ ಹಾಗೂ ಭವ್ಯ ಕೃಷ್ಣಾರತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಮಹಿಳೆಯರ ಬೆಳ್ಳಿ ರಥೋತ್ಸವ, ಗುಗ್ಗಳೋತ್ಸವ, ಮಹಾ ಸರ್ವಧರ್ಮ ಸಮನ್ವಯ ರಥೋತ್ಸವ ಹಾಗೂ ಜೀವನ ದರ್ಶನ ಪ್ರವಚನ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಐತಿಹಾಸಿಕ ವೀರಭದ್ರ ದೇವರು ಮತ್ತು ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಸರ್ವಧರ್ಮ ಸಮನ್ವಯ ರಥೋತ್ಸವ ಎಲ್ಲ ಧರ್ಮಿಯರನ್ನು ಒಳಗೊಂಡು ನಡೆಯುವ, ಸರ್ವ ಸಮುದಾಯಗಳ ಸಮನ್ವಯದ ಉತ್ಸವವಾಗಿದೆ ಎಂದರು.
ಸ್ವಪ್ನಾಲಿ ಗಣೇಶ ಹುಕ್ಕೇರಿ ಮಾತನಾಡಿ, ಬಸವಣ್ಣನವರ ಆಚಾರ-ವಿಚಾರ, ಸಮಸಮಾಜದ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಕುರಿತು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಹಾರ-ವಿಹಾರ, ಸಂಸ್ಕೃತಿ-ಪರಂಪರೆ ಪದ್ಧತಿಗಳ ಬಗ್ಗೆ ಜಾಗೃತಿ ವಹಿಸಬೇಕು. ಮನೆಯಲ್ಲಿ ಸಿದ್ಧಪಡಿಸಿದ ಆಹಾರವೇ ಆರೋಗ್ಯಕ್ಕೆ ಉತ್ತಮ. ಸಂಪಾದನೆಯ ಅಲ್ಪ ಭಾಗವನ್ನು ಸತ್ಕಾರ್ಯಗಳಿಗೆ, ದಾನ, ಧರ್ಮಗಳಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಮಹಿಳೆಯರ ಬೆಳ್ಳಿ ರಥೋತ್ಸವ ಹಾಗೂ ಗುಗ್ಗಳೋತ್ಸವಕ್ಕೆ ನೀಲಾಂಬಿಕಾ ಪ್ರಕಾಶ ಹುಕ್ಕೇರಿ ಚಾಲನೆ ನೀಡಿದರು. ಬೆಳ್ಳಿ ರಥೋತ್ಸವ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡು ಕಾಡಸಿದ್ಧೇಶ್ವರ ಸಂಸ್ಥಾನಮಠ ಮಾರ್ಗವಾಗಿ ರುದ್ರಪಾದ ಬಸವೇಶ್ವರ ದೇವಸ್ಥಾನ ತಲುಪಿತು. ಪುರವಂತರ ಒಡಪು ಹಾಗೂ ಕೆಂಡಸೇವೆ ಗಮನಸೆಳೆಯಿತು.
ಗುರುಪಾದ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಅಜಿತ್ ಶಂಭುಲಿಂಗ ಶಿವಾಚಾರ್ಯರು, ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶಿವಯೋಗಿ ಶಿವಾಚಾರ್ಯರು, ಮಲ್ಲಿಕಾರ್ಜುನ ಸ್ವಾಮೀಜಿ, ವೀರೇಶ ದೇವರು, ರುದ್ರಮುನಿ ಶಿವಾಚಾರ್ಯರು, ರೇವಣಸಿದ್ಧೇಶ್ವರ ಶಿವಾಚಾರ್ಯರು, ಚನ್ನವೀರ ಶಿವಾಚಾರ್ಯರು, ರಾಚೋಟಿಶ್ವರ ಶಿವಾಚಾರ್ಯರು, ಉತ್ತರಾಧಿಕಾರಿ ರೇಣುಕಾ ದೇವರು ಇತರರಿದ್ದರು.

ಕೂಡು ಕುಟುಂಬದ ಕಲ್ಪನೆ ಬಲಗೊಳ್ಳಲಿ

ಪ್ರಸ್ತುತ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆ ಸಾಕಷ್ಟು ಬದಲಾವಣೆ ಕಂಡಿದೆ. ಭಾರತೀಯ ಸಂಸ್ಕೃತಿಯ ತಹಳದಿಯಾದ ಕುಟುಂಬ ವ್ಯವಸ್ಥೆ ಈಚೆಗೆ ಸಂಕುಚಿತಗೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ. ಕುಟುಂಬ ಎಂದರೆ ಕೇವಲ ಗಂಡ-ಹೆಂಡತಿ ಎಂಬುದಕ್ಕಷ್ಟೇ ಸೀಮಿತವಲ್ಲ. ಸತಿ-ಪತಿ ವಿರಸ ಬಂದಾಗ ತಿಳಿಹೇಳಲು ಮನೆಯಲ್ಲಿ ಹಿರಿಯರು ಇರಬೇಕು. ಕೂಡು ಕುಟುಂಬದ ಕಲ್ಪನೆ ಬಲಗೊಳ್ಳಬೇಕಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net