ಅಥಣಿ ಪಟ್ಟಣದ ೆಡರಲ್ ಬ್ಯಾಂಕ್ ಎದುರು ವಿವಿಧ ಬೇಡಿಕೆಗೆ ಆಗ್ರಹಿಸಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟಿಸಿದರು. ರಾಜು ಪೂಜಾರಿ, ತಿರುಪತಿ ಹೇರಕಲ್, ಸುರೇಶ ಜೋಶಿ, ಆನಂದ ತೇಲಿ, ರಾಜಕುಮಾರ ಕುರಣಿ ಇತರರಿದ್ದರು.
ಅಥಣಿ: ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ವಾರದ 5 ದಿನ ಕರ್ತವ್ಯ ನಿಗದಿಪಡಿಸಿ, ವಾರಾಂತ್ಯದ ಎರಡು ದಿನ ರಜೆ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಬಂದ್ ಮಾಡಿ, ಕೈಗೆ ಕಪ್ಪುಪಟ್ಟಿ ಧರಿಸಿ ೆಡರಲ್ ಬ್ಯಾಂಕ್ ಶಾಖೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕೆನರಾ ಬ್ಯಾಂಕ್ ಸಿಬ್ಬಂದಿ ರಾಜು ಪೂಜಾರಿ ಮಾತನಾಡಿ, 2022-23ರಲ್ಲಿ ಕೇಂದ್ರ ಸರ್ಕಾರ 5 ದಿನ ಬ್ಯಾಂಕ್ ಕಾರ್ಯನಿರ್ವಹಣೆ ಮಾಡಲು ಒಪ್ಪಿಕೊಂಡಿತ್ತು. ಆದರೆ, ಆ ಆದೇಶ ಇನ್ನೂ ಅನ್ವಯವಾಗಿಲ್ಲ. ಕೇಂದ್ರ ಸರ್ಕಾರದ ಅಧೀನಲ್ಲಿರುವ ಇತರ ಕ್ಷೇತ್ರಗಳಿಗೆ ಅನ್ವಯವಾಗಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್ ಸೇರಿ ಖಾಸಗಿ ಬ್ಯಾಂಕ್ ಸಿಬ್ಬಂದಿ ಇದರಿಂದ ವಂಚಿತರಾಗಿದ್ದಾರೆ. ಸರ್ಕಾರ ತಾರತಮ್ಯ ಸರಿಪಡಿಸಿ 5 ದಿನಗಳ ಕಾರ್ಯವ್ಯವಸ್ಥೆ ಅನುಷ್ಠಾನಕ್ಕೆ ತರಬೇಕು ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಿವಿಧ ಬ್ಯಾಂಕ್‌ಗಳ ಸಿಬ್ಬಂದಿ ತಿರುಪತಿ ಹೇರಕಲ್, ಸುರೇಶ ಜೋಶಿ, ಆನಂದ ತೇಲಿ, ರಾಜಕುಮಾರ ಕುರಣಿ, ಅಶೋಕ ಬಬುಜಿ, ಲಕ್ಷ್ಮಣ ಬುರುಡ, ಸಿದ್ಧರಾಮ ಎಸ್., ಮಹೇಶ ಡಂಬಳಕರ, ಸುನೀಲ ಆಚಾರಟ್ಟಿ, ಸಚಿನ ಸೌದತ್ತಿ ಇತರರು ಇದ್ದರು.