ಖಾನಾಪುರ: ತಾಲೂಕಿನ ಚಾಪಗಾಂವನ ಶ್ರೀ ಪೊಂಡೇಶ್ವರ ದೇವಸ್ಥಾನದಲ್ಲಿ ಎರಡು ಬೆಳ್ಳಿ ಕಿರೀಟ ಕಳ್ಳತನವಾದ ಘಟನೆ ಈಚೆಗೆ ನಡೆದಿದೆ. 9.5 ಲಕ್ಷ ರೂ. ಮೌಲ್ಯದ 3.22 ಕೆಜಿ ಕಿರೀಟವನ್ನು ದೇವಸ್ಥಾನದ ಮುಂದಿನ ಬಾಗಿಲಿನ ಬೀಗ ಮುರಿದು, ಕಿಟಕಿ ಮೂಲಕ ಪ್ರವೇಶಿಸಿ ಕದ್ದುಕೊಂಡು ಹೋಗಿದ್ದಾರೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್‌ಸ್ಪೆಕ್ಟರ್ ಧರ್ಮಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.