1.34 ಲಕ್ಷ ಮೃತ ಮತದಾರರು ಪತ್ತೆ

 ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಎಸ್‌ಐಆರ್ ಕಾರ್ಯಾಗಾರದಲ್ಲಿ ಮೊಹಮ್ಮದ ರೋಷನ್ ಮಾತನಾಡಿದರು. ರೋಹಿತ ಸಿಂಗ್, ಗೀತಾ ಕೌಲಗಿ, ವಿಜಯಕುಮಾರ ಹೊನಕೇರಿ ಇತರರಿದ್ದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಎಸ್‌ಐಆರ್ ಕಾರ್ಯಾಗಾರದಲ್ಲಿ ಮೊಹಮ್ಮದ ರೋಷನ್ ಮಾತನಾಡಿದರು. ರೋಹಿತ ಸಿಂಗ್, ಗೀತಾ ಕೌಲಗಿ, ವಿಜಯಕುಮಾರ ಹೊನಕೇರಿ ಇತರರಿದ್ದರು.
Published on

ಬೆಳಗಾವಿ:

ಪ್ರಸ್ತುತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ವೇಳೆ ಜಿಲ್ಲೆಯಲ್ಲಿ 1,34,903 ಮೃತ ಮತದಾರರು ಪತ್ತೆಯಾಗಿದ್ದು, ಎಲ್ಲ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು.
ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಶುಕ್ರವಾರ ಜರುಗಿದ ಕರಡು ಮತದಾರರ ಪಟ್ಟಿ ಪ್ರಕಟಣೆ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ, ಜಿಲ್ಲೆಯ 18 ವಿಧಾನ ಸಭಾ ಕ್ಷೇತ್ರದಲ್ಲಿ 41,07,000 ಮತದಾರರಿಗೆ ಎನ್ಯೂಮರೇಷನ್ ಅರ್ಜಿಗಳನ್ನು 4,525 ಬಿ.ಎಲ್.ಓ. ಗಳ ಮೂಲಕ ವಿತರಿಸಲಾಗಿದೆ. ಈ ಪೈಕಿ 35,93,561 ಅರ್ಜಿಗಳನ್ನು ಗಣಕೀಕರಣ ಮಾಡಲಾಗಿದ್ದು,36,476 ಮತದಾರರ ಪಟ್ಟಿ ಮ್ಯಾಪಿಂಗ್ ಆಗಿಲ್ಲ. 26,459 ಮತದಾರರು ಎಸ್‌ಐಆರ್‌ನಿಂದ ಗೈರಾಗಿದ್ದಾರೆ. ಒಟ್ಟು 2,83,249 ಶಾಶ್ವತ ಸ್ಥಳಾಂತರ ಮತದಾರರನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಗೈರು, ಮೃತ ಹಾಗೂ ಸ್ಥಳಾಂತರಗೊಂಡಂತಹ ಮತದಾರರ ವಿವರಗಳನ್ನು ಈಗಾಗಲೇ ಸಂಬಂಧಿಸಿದ ಕಚೇರಿಗಳಿಗೆ ಸಲ್ಲಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗದಿದ್ದಲ್ಲಿ ಫಾರ್ಮ ನಂ.6ರ ಮೂಲಕ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಅವಕಾಶವಿದೆ. ಈ ಕಾರ್ಯಕ್ಕೆ ಬ್ಲಾಕ್ ಮಟ್ಟದ ಅಧಿಕಾರಿಗಳ ಜತೆವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದರ ಮೂಲಕ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸೂಚಿಸಿದರು.
ಆ.24ರಿಂದ ಲಿಂಕ್ ಅಥವಾ ಸಂಬಂಧಿಕರಿಲ್ಲದ ಮ್ಯಾಪಿಂಗ್ ಇರದ ಮತದಾರರಿಗೆ ನೋಟಿಸ್ ಜನರೇಟ್ ಮಾಡಬೇಕು. ನೋಟಿಸ್ ಗಳನ್ನು ಬಿ.ಎಲ್.ಓ.ಗಳು ಖುದ್ದಾಗಿ ಮತದಾರರ ಮನೆಗೆ ತಲುಪಿಸಿ ಮತದಾರರ ಸಹಿ ಹಾಗೂ ದಾಖಲೆಗಳನ್ನು ಸ್ವೀಕರಿಸುವ ಛಾಯಾ ಚಿತ್ರವನ್ನು ಮೋಬೈಲ್ ಆಪನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಈವಿಷಯದಲ್ಲಿ ನಿರ್ಲಕ್ಷೃ ಮಾಡುವುದು ಸರಿಯಲ್ಲ ಎಮದರು.
ದೇಶದಲ್ಲಿ 1987 ಜುಲೈ 1ರಕ್ಕಿಂತ ಮೊದಲು ಜನಿಸಿದವರು ಸ್ವಂತ ದಾಖಲೆ ನೀಡಬೇಕು. 1987 ಜುಲೈ 1ರಿಂದ 2004 ಡಿಸೆಂಬರ್ 2ರ ನಡುವೆ ಜನಿಸಿದವರು ಸ್ವಂತ ದಾಖಲೆಯೊಂದಿಗೆ ತಂದೆ ಅಥವಾ ತಾಯಿಯ ಹುಟ್ಟಿದ ದಿನಾಂಕ ಹಾಗೂ ಸ್ಥಳದ ದಾಖಲೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ನೋಟಿಸ್ ಗೆ ಸಂಬಂಧಿಸಿದ ಅಹವಾಲುಗಳನ್ನು ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುವಂತೆ ಸೂಚಿಸಿದರು.
ಪಾಲಿಕೆ ಉಪ ಆಯುಕ್ತರಾದ ಸಿದ್ದು ಹುಲ್ಲೋಳಿ ಮಾತನಾಡಿ, ಆ.24 ರಂದು ಕರಡು ಪ್ರತಿಯನ್ನು ಪ್ರಕಟಿಸಲಾಗುತ್ತಿದ್ದು, ಒಂದು ತಿಂಗಳು ಕಾಲ ಆಕ್ಷೇಪಣೆಗಳನ್ನು ಸ್ವೀಕರಿಸಲು ಕಾಲಾವಕಾಶವಿರುತ್ತದೆ. 18 ವಿಧಾನ ಸಭಾ ಕ್ಷೇತ್ರಗಳಿಗೆ 126 ಹೆಚ್ಚುವರಿ ಎ.ಇ.ಆರ್.ಓ ಗಳನ್ನು ನೇಮಿಸಲಾಗಿದ್ದು ಇವರು ತಮ್ಮ ಲಾಗಿನ್ ನಲ್ಲಿ ನೋಟೀಸ್ ಜನರೇಟ್ ಮಾಡಬೇಕು. ನೋಟಿಸ್ ಸಂಬಂದಪಟ್ಟಂತೆ ಅಹವಾಲುಗಳನ್ನು ಆಲಿಸಲು ವಾರ್ಡವಾರು, ಗ್ರಾಮ ಪಂಚಾಯತಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನಗರ ಪೋಲಿಸ್ ಆಯುಕ್ತ ಭೂಷಣ ಭೊರಸೆ, ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net