10.6 ಲಕ್ಷ ಟನ್ ಕಬ್ಬು ನುರಿಕೆ

ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಕಟಾವು ಮತ್ತು ಸಾಗಣೆ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಭರತೇಶ ಬನವಣೆ, ತಾತ್ಯಾಸಾಹೇಬ ಕಾಟೆ, ಅಜಿತ ದೇಸಾಯಿ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ ಇತರರಿದ್ದರು.
ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಕಟಾವು ಮತ್ತು ಸಾಗಣೆ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಭರತೇಶ ಬನವಣೆ, ತಾತ್ಯಾಸಾಹೇಬ ಕಾಟೆ, ಅಜಿತ ದೇಸಾಯಿ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ ಇತರರಿದ್ದರು.
Published on
ಮಾಂಜರಿ: ಪದ್ಮಶ್ರೀ ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಅಮಿತ ಕೋರೆ ಮತ್ತು ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾರ್ಗದರ್ಶನದಲ್ಲಿ ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಹಂಗಾಮಿನಲ್ಲಿ 10.60 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ ಗುಣಮಟ್ಟದ ಸಕ್ಕರೆ ಉತ್ಪಾದಿಸಿದೆ ಎಂದು ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ ಹೇಳಿದರು.
ಪಟ್ಟಣದ ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಕಾರ್ಮಿಕರ ಸಮುದಾಯ ಭವನದಲ್ಲಿ ಬುಧವಾರ ಕಬ್ಬು ಸಾಗಣೆ ಮತ್ತು ಕಬ್ಬು ಕಟಾವು ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿ, ಈ ವರ್ಷ ಕಬ್ಬು ನುರಿಸುವ ಗುರಿ ತಲುಪಲು ಸಕ್ಕರೆ ಕಾರ್ಖಾನೆಯ ಎಲ್ಲ ಸದಸ್ಯರು ಹಾಗೂ ಕಾರ್ಮಿಕರಿಂದ ಸಾಧ್ಯವಾಗಿದೆ ಎಂದರು.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಆರ್.ಬಿ. ಖಾಂಡಗಾವೆ ಮಾತನಾಡಿ, ಕಾರ್ಖಾನೆ ಹಂಗಾಮಿನಲ್ಲಿ ಉತ್ತಮ ಕಬ್ಬು ನುರಿಸುವಲ್ಲಿ ಶ್ರಮ ವಹಿಸಿದ ರೈತ ಸದಸ್ಯರಿಗೆ ಮತ್ತು ಕಾರ್ಖಾನೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಕಾರ್ಖಾನೆ ಹಿರಿಯ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಹಿರೇಮಠ, ಪ್ರಭಾರ ಕಬ್ಬು ಅಭಿವೃದ್ಧಿ ಅಧಿಕಾರಿ ಸಚಿನ ಮೊಪಗಾರ, ಕಾರ್ಖಾನೆ ಆಡಳಿತ ಮಂಡಳಿ ಸದಸ್ಯ ಅಜಿತರಾವ್ ದೇಸಾಯಿ, ಚೇತನ ಪಾಟೀಲ, ಅಣ್ಣಾಸಾಹೇಬ ಇಂಗಳೆ, ಮಲ್ಲಪ್ಪ ಮೈಶಾಳೆ, ಭೀಮಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net