ಟನ್ ಕಬ್ಬಿಗೆ ೩,೩೦೦ ರೂ. ದರ ನಿಗದಿ

ನಿಪ್ಪಾಣಿ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಮಲಗೊಂಡ ಪಾಟೀಲ ಮಾತನಾಡಿದರು. ಪವನಕುಮಾರ ಪಾಟೀಲ, ಅವಿನಾಶ ಪಾಟೀಲ, ರಾಮಗೊಂಡ ಪಾಟೀಲ ಇತರರಿದ್ದರು.
ನಿಪ್ಪಾಣಿ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಮಲಗೊಂಡ ಪಾಟೀಲ ಮಾತನಾಡಿದರು. ಪವನಕುಮಾರ ಪಾಟೀಲ, ಅವಿನಾಶ ಪಾಟೀಲ, ರಾಮಗೊಂಡ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲಗೊಂಡ ಪಾಟೀಲ ಹೇಳಿಕೆ
  • ಕಾರ್ಖಾನೆ ಸಾಮರ್ಥ್ಯ ೧೧ ಸಾವಿರ ಟಿಸಿಡಿ
ನಿಪ್ಪಾಣಿ: ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಮಾರ್ಗದರ್ಶನದಲ್ಲಿ ಕಾರ್ಖಾನೆ ಪ್ರತಿನಿತ್ಯ ೧೧ ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ೬ ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯ (ಟಿಸಿಡಿ) ಹೊಂದಿದ್ದ ಮಿಲ್ ೮,೫೦೦ ಟನ್‌ಗೆ ಹೆಚ್ಚಿಸಲಾಗಿದ್ದು, ನ.೧೬ರಂದು ಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡ ಪಾಟೀಲ ಹೇಳಿದರು.
ಸ್ಥಳೀಯ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಹಳೆಯ ಮಿಲ್ ೨,೫೦೦ ಟನ್ ಕಬ್ಬು ನುರಿಸುತ್ತಿದ್ದು, ಅದಕ್ಕೆ ೮,೫೦೦ ಟಿಸಿಡಿ ಮಿಲ್ ಜತೆಯಾಗಿ ಕಾರ್ಯನಿರ್ವಹಿಸಲಿವೆ ಎಂದರು.
ಕಾರ್ಖಾನೆ ರೈತರ ಹಿತದೃಷ್ಟಿಯಿಂದ ಹಲವು ಅನುಕೂಲಕರ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಿದೆ. ರಾಜ್ಯ ಸರ್ಕಾರದ ಆದೇಶದಂತೆ ಮೊದಲ ಕಂತಿನಲ್ಲಿ ಕಾರ್ಖಾನೆಗೆ ಕಬ್ಬು ಕಳುಹಿಸಿದ ರೈತನಿಗೆ ಪ್ರತಿ ಟನ್ ಕಬ್ಬಿಗೆ ೩,೨೦೦ ಪಾವತಿಸಲಾಗುವುದು. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ಎರಡನೇ ಕಂತಿನಲ್ಲಿ ಕಾರ್ಖಾನೆ ೫೦ ರೂ. ಮತ್ತು ರಾಜ್ಯ ಸರ್ಕಾರ ೫೦ ರೂ. ಸಹಾಯಧನ ಪಾವತಿಸಲಿವೆ. ಒಟ್ಟಾರೆ ರೈತರಿಗೆ ಟನ್ ಕಬ್ಬಿಗೆ ೩,೩೦೦ ದರ ನೀಡಲಾಗುತ್ತದೆ ಎಂದರು.
ಕಾರ್ಖಾನೆ ಸದಸ್ಯರು ಹಾಗೂ ರೈತರು ಗುಣಮಟ್ಟದ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಿ ಕಬ್ಬು ನುರಿಸುವ ಹಂಗಾಮು ಯಶಸ್ವಿಗೊಳಿಸಬೇಕು ಎಂದರು.
ಕಾರ್ಖಾನೆ ಉಪಾಧ್ಯಕ್ಷ ಪವನಕುಮಾರ ಪಾಟೀಲ, ಸಂಚಾಲಕ ಅವಿನಾಶ ಪಾಟೀಲ, ರಾಮಗೊಂಡ ಪಾಟೀಲ, ಜಯವಂತ ಭಾಟಲೆ, ಪ್ರಕಾಶ ಶಿಂಧೆ, ಸುಹಾಸ ಗೂಗೆ, ಸುನೀಲ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ ಮತ್ತು ಕಾರ್ಖಾನೆಯ ಅಽಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net