ಸಚಿವಾಲಯ ಸ್ಥಳಾಂತರಿಸಲು ಒತ್ತಾಯ

ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯ ಮಟ್ಟದ ಇಲಾಖೆಗಳ ಸಚಿವಾಲಯಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಚಿಕ್ಕೋಡಿಯ ನಮ್ಮ ಕನ್ನಡಿಗರ ಬಳಗ ಸಂಘಟನೆ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿಗೆ ಮನವಿ ಸಲ್ಲಿಸಿದರು.ಬಾಲಚಂದ್ರ ಬಣವಿ, ಅಶೋಕ ಶಿಗ್ಗಾವಿ, ಸತ್ಯವ್ವ ಕಾಂಬಳೆ ಇತರರಿದ್ದರು.

Published on
ಚಿಕ್ಕೋಡಿ: ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಇಲಾಖೆಗಳ ಸಚಿವಾಲಯಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ನಮ್ಮ ಕನ್ನಡಿಗರ ಬಳಗ ಸಂಘಟನೆ ಕಾರ್ಯಕರ್ತರು ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿಗೆ ಈಚೆಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕದ ಜನರಿಗೆ ವಿವಿಧ ಕಾರ್ಯ ನಿಮಿತ್ತ ದೂರದ ಬೆಂಗಳೂರಿನಲ್ಲಿರುವ ವಿಧಾನಸೌಧಕ್ಕೆ ಹೋಗಲು ತೊಂದರೆಯಾಗುತ್ತಿದೆ. ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಇಲಾಖೆಗಳ ಸಚಿವಾಲಯ ಸ್ಥಳಾಂತರಗೊಂಡರೆ ಜನರಿಗೆ ಅನುಕೂಲವಾಗುತ್ತದೆ.
 ಶಾಸಕರ ಭವನ, ಅಧಿಕಾರಿಗಳಿಗೆ ವಸತಿ ನಿಲಯ ನಿರ್ಮಿಸಿದರೆ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಒತ್ತಾಯಿಸಿದರು. ಬಾಲಚಂದ್ರ ಬಣವಿ, ಅಶೋಕ ಶಿಗ್ಗಾಂವಿ, ಸತ್ಯವ್ವ ಕಾಂಬಳೆ, ವಿನೋದ ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net