ಬೆಳಗಾವಿ ಜಿಲ್ಲೆ ಯಡೂರಿನ ಕಾಡದೇವರಮಠದಲ್ಲಿ 'ಗೋ ಕೈಲಾಸ' ಉದ್ಘಾಟನೆ: ಡಾ. ವಿಜಯ ಸಂಕೇಶ್ವರ ದಂಪತಿಗೆ ವಿಶ್ವ ಚೇತನ ಪ್ರಶಸ್ತಿ ಪ್ರದಾನ

VRL
Published on

ಬೆಳಗಾವಿ: ಶ್ರೀಕ್ಷೇತ್ರ ಯಡೂರಿನ ಕಾಡದೇವರಮಠದ ಆವರಣದಲ್ಲಿ ನಿರ್ಮಿಸಿರುವ 'ಗೋ ಕೈಲಾಸ'ವನ್ನು ಶನಿವಾರ ಬೆಳಗ್ಗೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಉದ್ಘಾಟಸಿದರು. ಇದೇ ವೇಳೆ ನೆರೆ ಸಂತ್ರಸ್ತರ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಕಾಡಸಿದ್ದೇಶ್ವರ ಮಠದಿಂದ ನೀಡುವ "ವಿಶ್ವ ಚೇತನ" ಪ್ರಶಸ್ತಿಯನ್ನು ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ ದಂಪತಿ ಸ್ವೀಕರಿಸಿದರು. ಪ್ರಶಸ್ತಿ ಪ್ರದಾನ ಮಾಡಿದ ಶ್ರೀಶೈಲ ಜಗದ್ಗರು ಡಾ, ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

ಶ್ರೀಶೈಲ ಜಗದ್ಗುರು ಡಾ‌. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿ ಮತ್ತಿತರರು ಇದ್ದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net