

ಬೆಳಗಾವಿ : ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024 ರ ನಿಮಿತ್ಯ ಮತದಾರರ ನೋಂದಣಿ ಜು. ರಿಂದ ಆ.21ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯಲಿದೆ.
ಹೊಸದಾಗಿ ಮತದಾರರ ನೋಂದಣಿ, ಮರಣ ಹೊಂದಿದಲ್ಲಿ ಮತ್ತು ಸ್ಥಳಾಂತರ, ತಿದ್ದಪಡಿ, ವರ್ಗಾವಣೆ ಮಾಡಲು ಆ.21ರ ವರಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಅವಶ್ಯಕ ದಾಖಲೆಗಳ ದೃಡಿಕರಣಗಳೊಂದಿಗೆ ಸಲ್ಲಿಸುವ ಮೂಲಕ ಸಾರ್ವಜನಿಕರು ಸೌಲಭ್ಯ ಪಡೆಯಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ತಿಳಿಸಿದ್ದಾರೆ.