ಬೆಳಗಾವಿಗೆ ವೇಣುಧ್ವನಿ ಕೊಡುಗೆ ಅಪಾರ

05 Jaggu 3
ಬೆಳಗಾವಿ ಕೆಎಲ್ಇ ವಿವಿಯ ವೇಣುಧ್ವನಿ ಬಾನುಲಿ ಕೇಂದ್ರ ಮತ್ತು ರಾಣಿ ಚನ್ನಮ್ಮ ವಿವಿಯ ಪತ್ರಿಕೋದ್ಯಮ ವಿಭಾಗದ ಮಧ್ಯ ಶೈಕ್ಷಣಿಕ ಒಡಬಂಡಿಕೆ ಕಾರ್ಯಕ್ರಮ ನಡೆಯಿತು. ಡಾ. ವಿರೇಶಕುಮಾರ ನಂದಗಾಂವ, ಮಂಜುನಾಥ ಬಳ್ಳಾರಿ, ಕಾರ್ಯಕ್ರಮ ನಿರ್ವಾಹಕಿ ಮನೀಷಾ, ಡಾ. ಸುಷ್ಮಾ ಆರ್. ಇದ್ದರು.
Published on

ಬೆಳಗಾವಿ: ಕೆಎಲ್ಇ ವಿವಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವೇಣುಧ್ವನಿ ಸಮುದಾಯ ಬಾನುಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸ್ಥಳೀಯ ಕಲೆ, ಸಂಸ್ಕೃತಿ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತಿದೆ ಬಾನುಲಿ ಕೇಂದ್ರದ ನಿಲಯ ನಿರ್ವಾಹಕ ಡಾ. ವಿರೇಶಕುಮಾರ ನಂದಗಾಂವ ಹೇಳಿದರು.

ವೇಣುಧ್ವನಿ 90.4 ಎ್ಎಂ ಸಮುದಾಯ ಬಾನುಲಿ ಕೇಂದ್ರದಲ್ಲಿ ಮಂಗಳವಾರ ಜರುಗಿದ ಕೆಎಲ್ಇ ವಿವಿಯ ವೇಣುಧ್ವನಿ ಬಾನುಲಿ ಕೇಂದ್ರ ಮತ್ತು ರಾಣಿ ಚನ್ನಮ್ಮ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಶೈಕ್ಷಣಿಕ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಣಿ ಚನ್ನಮ್ಮ ವಿವಿಯು ಕರ್ನಾಟಕ ಉತ್ತರ ಭಾಗದ ದೊಡ್ಡ ವಿವಿ ಎಂದು ಖ್ಯಾತಿ ಪಡೆದಿದೆ. ಕೆಎಲ್ಇ ವಿವಿಯು ಆರೋಗ್ಯ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆ ಎಂದು ಹೆಗ್ಗುರುತು ಹೊಂದಿದೆ. ಈ ಎರಡು ವಿವಿಗಳ ಮಧ್ಯ ಪರಸ್ಪರ ಈ ಒಡಂಬಡಿಕೆ ಹೊಸ ಕೀರ್ತಿ ಮತ್ತು ಶೈಕ್ಷಣಿಕ ಚುಟುವಟಿಕೆಗಳಿಗೆ ನವ ಚೈತನ್ಯ ನೀಡಲಿದೆ ಎಂದರು. ಆರ್‌ಸಿಯು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕಿ ಡಾ. ಸುಷ್ಮಾ ಆರ್. ಮಾತನಾಡಿ, ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರವು ಅತ್ಯಂತ ಸದಭಿರುಚಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಟಿವಿ, ಸಿನಿಮಾ ಕೆಲ ಬಾರಿ ಅಬ್ಬರ ಎನ್ನಿಸಬಹುದು. ಬಾನುಲಿ ಕಾರ್ಯಕ್ರಮಗಳು ಸದಾ ಮನಸ್ಸಿಗೆ ಮುದ ನೀಡುತ್ತವೆ ಎಂದರು.

ಕೆಎಲ್ಇ ವೇಣುಧ್ವನಿ ಬಾನುಲಿ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿ, ಕಾರ್ಯಕ್ರಮ ನಿರ್ವಾಹಕಿ ಮನೀಷಾ, ಪತ್ರಿಕೋದ್ಯಮ ವಿಭಾಗದ ಬೋಧಕ ಸಿಬ್ಬಂದಿ ಆನಂದ ತುಳಸಿಕಟ್ಟಿ, ಅರುಣ ಹೊಸಮಠ ಇತರರಿದ್ದರು. ಬೋಧಕ ಸಹಾಯಕಿ ವಿದ್ಯಾಶ್ರೀ ಹಾಲಕೇರಿಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net