ಬೆಳಗಾವಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ 4 ಜನರಲ್ಲಿ ಕರೊನಾ ವೈರಸ್ ದೃಢವಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ್ದ 8 ವರ್ಷದ ಬಾಲಕ ಹಾಗೂ 29, 30 ಹಾಗೂ 32 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದೆ. ಇವರೆಲ್ಲ ಬೆಳಗಾವಿ ನಗರ, ಬೈಲಹೊಂಗಲದವರಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ.