ಬೆಳಗಾವಿ ಸಾಮೂಹಿಕ ನಕಲು ಪ್ರಕರಣ; ಪರೀಕ್ಷಾ ಕೇಂದ್ರದ ಇಬ್ಬರು ಶಿಕ್ಷಕರು ಅಮಾನತ್ತು

Screenshot_20230406_203755.jpg
Published on

ಬೆಳಗಾವಿ : ಜಿಲ್ಲೆಯಲ್ಲಿನ ಎಸ್ಸೆಸ್ಸೆಲ್ಸಿ  ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ತಡೆಯಲು ವಿಫಲರಾಗಿ, ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರ ಮುಖ್ಯ ಆಧೀಕ್ಷಕ ಹಾಗೂ ಉಪಮುಖ್ಯ ಅಧೀಕ್ಷಕರನ್ನು ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರಿ ಶಿಂತ್ರಿ ಅವರು ಅಮಾನತ್ತು ಮಾಡಿ ಗುರುವಾರ ಆದೇಶಿಸಿದ್ದಾರೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಕರ್ನಾಟಕ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರಾಗಿದ್ದ ಬಡಾಲದ ಸರ್ಕಾರಿ ಪ್ರೌಢ ಶಾಲೆಯ  ಮುಖ್ಯಶಿಕ್ಷಕ ಪಿ.ಸಿ.ವಂಟಮಾನ ಹಾಗೂ ಉಪ ಅಧೀಕ್ಷಕರಾಗಿದ್ದ, ಮುತ್ನಾಳದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಎಚ್.ಪಿ.ಅಮ್ಮಿನಬಾವಿ ಅವರು ಅಮಾನತತ್ತುಗೊಂಡವರು.‌
ಸಾಮೂಹಿಕ ನಕಲು ಪ್ರಕರಣದಲ್ಲಿ
ಕರ್ತವ್ಯ ನಿರ್ಲಕ್ಷತನ ಹಾಗೂ ಪರೀಕ್ಷೆಯ ಪಾವಿತ್ರತೆ ಮತ್ತು ಗೌಪ್ಯತೆಯನ್ನು ಕಾಪಾಡುವಲ್ಲಿ ವಿಫಲರಾಗಿರುವದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇವಾ ನಿಯಮಾವಳಿ (ವರ್ಗೀಕರಣ ಮತ್ತು ಅಪೀಲು) 1957 ನಿಯಮದಡಿ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತುಗೊಳಿಸಿರುವುದಾಗಿ ಆಯಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net