

ಬೆಳಗಾವಿ : ನಮ್ಮ ಬದುಕಿಗೆ ಸಮಾಜದ ಕೊಡುಗೆ ಅಪಾರವಾಗಿದೆ. ನಾವು ಸಮಾಜದ ಒಳಿತಿಗೆ ಮತ್ತು ಅದರ ಗಟ್ಟಿತನಕ್ಕೆ ಸ್ವಲ್ಪಾದರೂ ಋಣ ತೀರಿಸುವಂತೆ ಬದುಕಬೇಕು ಅಂದಾಗ ಮಾತ್ರ ಜೀವನ ಸಾರ್ಥಕವಾಗುವುದು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ. ಜಿ.ಹಿರೇಮಠ ಹೇಳಿದರು.
ಭಾನುವಾರ ಗೋಕಾಕ್‌ನಲ್ಲಿ ಲೈನ್ಸ್ ಕ್ಲಬ್ ಆಯೋಜಿಸಿದ್ದ ‘ರಿಜೆನ್ ಮೀಟ್ 2023’ರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಸವಣ್ಣನವರು 12ನೇ ಶತಮಾನದಲ್ಲೇ ಬದುಕಿನ ಹೆಜ್ಜೆಗಳಿಂದ ಶ್ರೀಮಂತ ನಾಡು ಕಟ್ಟುವಲ್ಲಿ ಶ್ರಮಿಸಿದ್ದಾರೆ. ಇದೀಗ ಲೈನ್ಸ್‌ಕ್ಲಬ್ ಈ ದಿಸೆಯಲ್ಲಿ ಹೆಜ್ಜೆ ಇಡುತ್ತಿರುವದು ಸಂಘ ಸಂಸ್ಥೆಗಳಿಗೆ. ಜಿಲ್ಲಾದ್ಯಂತ ಸಮಾಜ ಸೇವೆಯಲ್ಲಿ ಲೈನ್ಸ್ ಕ್ಲಬ್ ನೀಡುತ್ತಿರುವ ಸೇವೆ ಅತ್ಯಂತ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಡಾ.ಡಿ.ಎನ್.ಮಿಸಾಳೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದಸಂಸ್ಥೆಯ ಎಂಜೆಎಫ್ ಗುರುದೇವ ಸಿದ್ದಾಪೂರಮಠ ಅವರು, ಸಾರ್ವಜನಿಕ ಸೇವೆಗೆ ಮುಡಿಪಾಗಿರುವ ಸಂಸ್ಥೆಗೆ 2 ಎಕರೆ ಜಾಗೆಯನ್ನು ಸರ್ಕಾರದಿಂದ ನೀಡುವಂತೆ ವಿನಂತಿಸಿದರು.
ಮಹೇಂದ್ರ ಪೋರವಾಲ, ಡಾ.ಅಶೋಕ ಪಾಟೀಲ, ವಿಶ್ವನಾಥ ಬೆಲ್ಲದ, ಶಶಿಕಾಂತ ಜೋಶಿ, ಸತೀಶ ಬಾಳೆಕುಂದ್ರಿ, ಶ್ರೀಶೈಲ ಹಂಜಿ, ಎಚ್.ಬಿ.ಪಾಟಿಲ ಸೇರಿದಂತೆ ವಿವಿಧ ಪದಾಧಿಕಾರಿಗಳು ಇದ್ದರು. ಡಾ. ಅಶೋಕ ಮುರಗೋಡ ಸ್ವಾಗತಿಸಿದರು. ಎಸ್.ಕೆ.ಮಠದ ಹಾಗೂ ರುತುಜಾ ಸಿದ್ದಾಪೂರಮಠ ಕಾರ್ಯಕ್ರಮ ನಿರ್ವಹಿಸಿದರು.