ಆರೋಪಿಗಳ ಬಂಧನಕ್ಕೆ ಒತ್ತಾಯ

HN 9-3
Published on

ವಿಜಯಪುರ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಬಿಜಗುಪ್ಪಿ ಗ್ರಾಮದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಮೂರ್ತಿ ಭಗ್ನಗೊಳಿಸಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ನಮ್ಮ ಬಣ) ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮನ್ವಯ ಸಮಿತಿ ಹಾಗೂ ದಿ. ಬಿಜಾಪುರ ಹೆರ್ಟೆಜ್ ೌಂಡೇಷನ್ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕರವೇ (ನಮ್ಮ ಬಣ) ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಮಹಾ ಪುರುಷರನ್ನು ಧಾರ್ಮಿಕವಾಗಿ ಪೂಜಿಸುವ, ಗೌರವಿಸುವ ಸಂಸ್ಕೃತಿ, ಸಂಪ್ರದಾಯ, ಪರಂಪರೆ ನಮ್ಮದು. ಇಂತಹ ಮಹಾನೀಯರ ಮೂರ್ತಿಯನ್ನು ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಇಲ್ಲವೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ದಲಿತ ಸಮನ್ವಯ ಸಮಿತಿ ಅಧ್ಯಕ್ಷ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಭಗ್ನಗೊಳಿಸಿರುವ ಆರೋಪಿಗಳು ಯಾವುದೇ ಪಕ್ಷದವರಿರಲಿ, ಯಾರೇ ಇರಲಿ ಅಂತವರನ್ನು ಗುರುತಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ದಿ. ಬಿಜಾಪುರ ಹೆರ್ಟೆಜ್ ೌಂಡೇಷನ್ ಸಂಚಾಲಕ ಹಮ್ಜಾ ಮಹಿಬೂಬ, ಮುಖಂಡರಾದ ಕೆ.ಕೆ. ಬನ್ನಟ್ಟಿ, ಶರಣಗೌಡ ಬಿರಾದಾರ, ನಂದಾ ಮಾಶ್ಯಾಳ, ಮಹಾದೇವಿ ತಾಂಬಾ, ಶಾಲಂಬಿ ನಾಲಬಂದ, ಮನೋಜ ಹೊಸಮನಿ, ಬಾಬು ಲಮಾಣಿ, ಬಾಸು ರಾಠೋಡ, ವಸಂತರಾವ ಕುಲಕರ್ಣಿ, ರಾಜಕುಮಾರ ವಾಗಮೊರೆ, ಕೃಷ್ಣಾಜಿ ಕುಲಕರ್ಣಿ, ಸಂತೋಷ ಕವಲಗಿ, ನದೀಮ್ ಇನಾಮದಾರ ಮುಂತಾದವರು ಭಾಗವಹಿಸಿದ್ದರು.

ಬಸವ ಸೇನೆ ತೀವ್ರ ಖಂಡನೆ

ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳ ವಿರುದ್ಧ ಅಂತಾರಾಷ್ಟ್ರೀಯ ಬಸವ ಸೇನೆ ತೀವ್ರವಾಗಿ ಖಂಡಿಸಿದೆ. ಈ ಘಟನೆಯಿಂದ ಬಸವಾಭಿಮಾನಿಗಳಿಗೆ ತೀವ್ರ ನೋವು ತಂದಿದೆ. ಸರ್ಕಾರ ಕೂಡಲೇ ಈ ದುಷ್ಕೃತ್ಯ ಎಸಗಿದವರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಬಸವ ಸೇನೆ ಜಿಲ್ಲಾಧ್ಯಕ್ಷ ಸೋಮುಗೌಡ ಕಲ್ಲೂರ, ನ್ಯಾಯವಾದಿ ದಾನೇಶ ಅವಟಿ, ಮುಖಂಡರಾದ ಅಂಬಾದಾಸ ಜೋಶಿ, ಭೀಮಾಶಂಕರ ಪತ್ತಾರ, ಮಲ್ಲಿಕಾರ್ಜುನ ಗಬ್ಬೂರ, ರಾಯಣಗೌಡ ಪಾಟೀಲ, ಮಲ್ಲು ಮಸಳಿ, ಹಜಮಾ ಮೈಬೂಬ ಖಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net