ರಾಜ್ಯದಲ್ಲಿ ಮತ್ತೊಬ್ಬ ರೌಡಿಶೀಟರ್​ನ ಬರ್ಬರ ಹತ್ಯೆ...

murder1
Published on

ಬೆಳಗಾವಿ: ರಾಜ್ಯದಲ್ಲಿ ರೌಡಿಶೀಟರ್​ಗಳ ಹತ್ಯೆ ಮುಂದುವರಿದಿದ್ದು, ಇದೀಗ ಮತ್ತೊಬ್ಬ ರೌಡಿಶೀಟರ್​ನ ಕೊಲೆಯಾಗಿರುವ ಮಾಹಿತಿ ಹೊರಬಿದ್ದಿದೆ. ಬೆಳಗಾವಿ ನಗರದ ಶೆಹಬಾಜ್​ ಹತ್ಯೆಗೀಡಾದ ಯುವಕ.

ಶೆಹಬಾಜ್​ ರೌಡಿಶೀಟರ್ ಎನ್ನಲಾಗುತ್ತಿದ್ದು, ಬೆಳಗಾವಿಯ ಶೇಖ್ ಆಸ್ಪತ್ರೆಯ ಬಳಿ ಭಾನುವಾರ ತಡರಾತ್ರಿ ಕೊಲೆ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿದ್ದ ಶೆಹಬಾಜ್​ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಕೊಲೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇತ್ತೀಚೆಗೆ ಬಂಟ್ವಾಳದಲ್ಲಿ ಒಬ್ಬ ರೌಡಿಶೀಟರ್​ನ ಹತ್ಯೆ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net