ಕರೊನಾ ವಿಚಾರದಲ್ಲಿ ಅಧಿಕಾರಿಗಳಿಬ್ಬರ ಟಾಕ್​ ಫೈಟ್​​ ವಿಡಿಯೋ ವೈರಲ್​

Talk Fight
Published on

ಬೆಳಗಾವಿ: ಅನ್ಯರಾಜ್ಯದ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ವಿಚಾರವಾಗಿ ಅಧಿಕಾರಿಗಳಿಬ್ಬರು ವಾಗ್ವಾದ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಘಟನೆಯ ದೃಶ್ಯ ಈಗ ಜಾಲತಾಣದಲ್ಲಿ ಸಂಚರಿಸುತ್ತಿದೆ.

ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಉಪ‌ ಆಯುಕ್ತ ಎಸ್.ಬಿ.ದೊಡ್ಡಗೌಡರ ಹಾಗೂ ಕೆಎಸ್‌ಆರ್‌‌ಟಿಸಿ ಡಿಸಿ ಮಹಾದೇವಪ್ಪ ಮುಂಜಿ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪರಸ್ಪರ ಏಕವಚನದಲ್ಲಿ ಅಧಿಕಾರಿಗಳು ನಿಂದಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net