ಕೇಳಿದ್ದು ಬಿಟ್ಟು ಬೇರೆಯೊಂದನ್ನು ಕೊಟ್ಟಿದ್ದಕ್ಕೆ ರೆಬೆಲ್ ಆದ ಬಿಜೆಪಿ ಶಾಸಕ: ಮುಖ್ಯಮಂತ್ರಿ ಭೇಟಿಗೆ ತೆರಳಿದ ಮಹೇಶ ಕುಮಟಳ್ಳಿ

Mahesh Kumatalli 6 Feb 20
Published on

ಬೆಳಗಾವಿ: ಎಂಎಸ್​ಐಎಲ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಕುಮಟಳ್ಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭೇಟಿಗೆ ಬೆಂಗಳೂರಿಗೆ ತೆರಳಿದರು.

ಬೆಂಗಳೂರಿಗೆ ತೆರಳುವ ಮುನ್ನ ಅಥಣಿಯಲ್ಲಿ ಮಾಧ್ಯಮಗಳ ಜತೆ ಕುಮಟಳ್ಳಿ ಮಾತನಾಡಿದರು. ಎಂಎಸ್​ಐಎಲ್ ಬದಲು ಭೂಸೇನಾ ನಿಗಮ ಕೊಡಬೇಕು ಎಂದು ವರಿಷ್ಠರ ಮುಂದೆ ಕುಮಟಳ್ಳಿ ಬೇಡಿಕೆ ಇಟ್ಟಿದ್ದೆ ಎಂದು ತಿಳಿಸಿದರು.

ಸಚಿವ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಅಥಣಿ ಬಿಜೆಪಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದ ಪಕ್ಷದ ವರಿಷ್ಠರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಅಥಣಿ ಅಷ್ಟೆ ಅಲ್ಲ ರಾಜ್ಯದ ವಿವಿಧ ಕಡೆ ಜನ ಪ್ರತಿಭಟನೆ ಮಾಡುವವರಿದ್ದರು, ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಜುಗರ ಆಗಬಾರದು ಎಂದು ನಾನು ಬೇಡ ಎಂದು ಹೇಳಿದ್ದೇನೆ ಎಂದು ಅಥಣಿಯಲ್ಲಿ ಶಾಸಕ ಮಹೇಶ ಕುಮಟಳ್ಳಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net