ರಾಯಣ್ಣ ಪುತ್ಥಳಿ ತೆರವಿಗೆ ಖಂಡನೆ

HN 20-1
Published on

ವಿಜಯಪುರ: ಬೆಳಗಾವಿ ಜಿಲ್ಲೆಯ ಕಿರಣವಾಡಿ ಗ್ರಾಮದಲ್ಲಿ ಸ್ವಾತಂತ್ರೃ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಬೆಳಗಾವಿ ಜಿಲ್ಲಾಡಳಿತ ತೆರವುಗೊಳಿಸಿರುವುದನ್ನು ಖಂಡಿಸಿ ಹಾಲಮತ ಮಹಾಸಭಾ ಮತ್ತು ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಸಮಾಜ ಪಕ್ಷದ ರಾಜ್ಯ ಸಂಯೋಜಕ ಧರ್ಮಣ್ಣ ತೊಂಟಾಪುರ ಮಾತನಾಡಿ, ಸ್ವಾತಂತ್ರಕ್ಕಾಗಿ ಹೋರಾಡಿ ವೀರಮರಣ ಹೊಂದಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಸ್ಥಳಿಯನ್ನು ಬೆಳಗಾವಿ ನಂದಗೋಡ ಮಾರ್ಗ ಕಿರಣವಾಡಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾಡಳಿತ ಸ್ವಾತಂತ್ರೃ ದಿನಾಚರಣೆದಿನದಂದು ರಾಷ್ಟ್ರ ಧ್ವಜ ಸಹಿತ ತೆರವುಗೊಳಿಸಿರುವುದು ಖಂಡನಾರ್ಹ. ಸ್ವಾತಂತ್ರೃ ಹೋರಾಟಗಾರರನಿಗೆ ಮಾಡಿದ ಅವಮಾನವಾಗಿದೆ. ಆದ್ದರಿಂದ ರಾಯಣ್ಣರ ಪುತ್ಥಳಿಯನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಶ್ರೀ ಮಾಳಿಂಗರಾಯ ಮಹಾರಾಜರು, ಸೋಮೇಶ್ವರ ಸ್ವಾಮೀಜಿ, ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ರವಿ ಕಿತ್ತೂರ, ಮುಖಂಡರಾದ ರಾಜಶೇಖರ ಕೋರಿ, ಸುನೀಲ ತೊಂಟಾಪುರ, ಗೋವಿಂದ ಸಿಂಧೆ, ಮೋಹನ ಮೇಟಿ, ಕರೆಪ್ಪ ಹೂಗಾರ, ಹಣಮಂತ ಬಿದರಿ, ಕೆಂಚಪ್ಪ ಬಳಗಾನೂರ, ವಿಠಲ ಶಿವಣಗಿ, ಶಿವು ಹಿರೇಕುರಬರ, ಅಂಗಪ್ಪ ಪೂಜಾರಿ, ರಾಜು ಕಗ್ಗೋಡ, ಸಿದ್ರಾಮ ಹಿಟ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net