ಜಗದೀಶ ಮೆಟಗುಡ್ಡ ಶಕ್ತಿ ಪ್ರದರ್ಶನ

IMG-20230418-WA0020.jpg
Published on


ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರದ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಜಗದೀಶ ಚನ್ನಪ್ಪ ಮೆಟಗುಡ್ಡ ಅವರು ತಮ್ಮ ಅಪಾರ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಬೃಹತ್ತ ಮೆರವಣಿಗೆ ಮೂಲಕ ಜೋಡೆತ್ತುಗಳ ಚಕ್ಕಡಿಯಲ್ಲಿ ತೆರಳಿ ಮಂಗಳವಾರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ‌ಮೊದಲು ನಾಡಿನ ಆರಾಧ್ಯ ದೈವ ಪಟ್ಟಣದ  ಮರಡಿಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು.  ಎಲ್ಲಿ ನೋಡಿದಲ್ಲಿ ಬಿಜೆಪಿ ಬಾವುಟಗಳು, ಟೋಪಿ, ರುಮಾಲು ರಾರಾಜಿಸಿದವು. ನರೇಂದ್ರ ಮೋದಿಜೀ, ಯಡಿಯೂರಪ್ಪ ಹಾಗೂ ಉತ್ತರ ಕರ್ನಾಟಕದ ಎತ್ತರದ ಹುಲಿ ಜಗದೀಶ ಮೆಟಗುಡ್ಡ, ವಿಜಯ ಮೆಟಗುಡ್ಡ ಪರವಾಗಿ ಜಯಘೋಷಗಳು ಮುಗಿಲು ಮುಟ್ಟಿದವು. ಡೊಳ್ಳು ಮೇಳ, ಝಾಂಜ ಪದಕ, ವಿವಿಧ ವಾಧ್ಯಮೇಳಗಳು ಮೆರವಣಿಗೆಗೆ ಕಳೆ ತಂದವು. ಲಂಬಾಣಿ ಮಹಿಳೆಯರ ಲಂಬಾಣಿ ಕುಣಿತ ವಿಶೇಷ ಗಮನ ಸೆಳೆಯಿತು. ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಹೂವಿನ ಹೊಳೆ ಹರಿಸಿದರು. ಬಿರು ಬಿಸಿಲಿನಲ್ಲೂ ಸುಮಾರು ೨೦ ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು ಬಾಗಿಯಾಗಿದ್ದರು. ನೀರಿನ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಸಂಸದೆ ಮಂಗಲಾ ಅಂಗಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಡಾ.ಬಿ.ಎಚ್. ಮೆಟಗುಡ್ಡ, ಎಸ್.ಎಫ್. ಹರಕುಣಿ, ಪ್ರೋ.ಸಿ.ವ್ಹಿ. ಜ್ಯೋತಿ, ಗುರುಪಾದ ಕಳ್ಳಿ, ಎಫ್.ಎಸ್. ಸಿದ್ದನಗೌಡರ, ಯುವ ಮುಖಂಡ ವಿಜಯ ಮೆಟಗುಡ್ಡ, ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಪ್ರಪೂಲ ಪಾಟೀಲ, ಎಸ್.ಜಿ. ಬೂದಯ್ಯನವರಮಠ, ಸುಭಾಷ ತುರಮರಿ, ವಾಸನಗೌಡ ಪಾಟೀಲ, ಸುನೀಲ ಮರಕುಂಬಿ, ಡಾ.ರಾಜು ಬಡ್ಲಿ, ಸಂತೋಷ ರಾಯರ, ಅನೀಲ ಮೆಟಗುಡ್ಡ, ಮಹಾಂತೇಶ ಮೆಟಗುಡ್ಡ, ಜಗದೀಶ ಬೂದಿಹಾಳ, ಮೋಹನ ವಕ್ಕುಂದ, ಬಸವರಾಜ ಬಂಡಿವಡ್ಡರ, ಸುರೇಶ ಮ್ಯಾಕಲ್, ಸಂತೋಷ ಹಡಪದ ಹಾಗೂ ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಹಸ್ರಾರು ಬಿಜೆಪಿ ಕಾರ್ಯಕರ್ತರು, ಮೆಟಗುಡ್ಡ ಅಭಿಮಾನಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net