

ಬೆಳಗಾವಿ : ಮುಂಗಾರು-2023 ನೇ ಹಂಗಾಮಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ದ್ರಾಕ್ಷಿ, ದಾಳಿಂಬೆ, ಮಾವು ಹಾಗೂ ಹಸಿ ಮೆನಸಿಣಕಾಯಿ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಬಹುದಾಗಿದೆ.
ಅಥಣಿ ತಾಲ್ಲೂಕಿಗೆ ದ್ರಾಕ್ಷಿ ಹಾಗೂ ದಾಳಿಂಬೆ, ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿಗೆ ಮಾವು ಹಾಗೂ ಹಸಿಮೆಣಸಿನಕಾಯಿ, ಬೆಳಗಾವಿ ತಾಲ್ಲೂಕಿಗೆ ಮಾವು ಬೆಳೆ, ಚಿಕ್ಕೋಡಿ ನಿಪ್ಪಾಣಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆ, ಗೋಕಾಕ ಮೂಡಲಗಿ ತಾಲ್ಲೂಕಿನ ಕೌಜಲಗಿ ಹೋಬಳಿಗೆ ದ್ರಾಕ್ಷಿ ಬೆಳೆ, ಗೋಕಾಕ ಹೋಬಳಿಗೆ ಮಾವು, ಗೋಕಾಕ, ಅರಭಾಂವಿ ಹಾಗೂ ಕೌಜಲಗಿ ಹೋಬಳಿಗಳಿಗೆ ಹಸಿಮೆಣಸಿನಕಾಯಿ ಬೆಳೆ, ಹುಕ್ಕೇರಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆ, ಖಾನಾಪೂರ ತಾಲ್ಲೂಕಿನ ಖಾನಾಪೂರ ಹಾಗೂ ಬೀಡಿ ಹೋಬಳಿಗಳಿಗೆ ಮಾವು, ರಾಯಬಾಗ ತಾಲೂಕಿಗೆ ದ್ರಾಕ್ಷಿ, ರಾಮದುರ್ಗ ತಾಲ್ಲೂಕಿನ ಮುದಕವಿ, ಕೆ, ಚಂದರಗಿ, ಕಟಕೋಳ, ಹೋಬಳಿಗಳಿಗೆ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆ ಮತ್ತು ಸವದತ್ತಿ ಯರಗಟ್ಟಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆಗಳಿಗೆ ಜುಲೈ.31ರೊಳಗಾಗಿ ಬೆಳೆ ವಿಮಾ ಪಾವತಿಸಬೇಕು.
ಪ್ರತಿ ಹೆಕ್ಟೇರ್, ದ್ರಾಕ್ಷಿ ಬೆಳೆಗೆ 14,000ರೂ., ದಾಳಿಂಬೆ ಬೆಳೆಗೆ 6,350 ರೂ., ಮಾವು ಬೆಳೆಗೆ 4,000 ರೂ. ಹಾಗೂ ಹಸಿಮೆಣಸಿನಕಾಯಿ ಬೆಳೆಗೆ 3,550 ರೂ. ನಂತೆ ರೈತರ ವಂತಿಕೆಯ ವಿಮಾ ಕಂತು ಸರ್ಕಾರದ ಅಧಿಸೂಚನೆ ಯಂತೆ ನಿಗದಿಯಾಗಿದ್ದು, ತಾಲೂಕು ಮತ್ತು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ, ಗ್ರಾಮ-ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಕಂತು ಪಾವತಿಸಬಹುದು.
ಅಧಿಸೂಚಿತ ಬೆಳೆಗಳಿಗೆ ಸಾಲ ಪಡೆದ ರೈತರ ವಂತಿಕೆಯನ್ನು ಸಾಲ ಪಡೆದ ಬ್ಯಾಂಕ್‌ಗಳಿಂದಲೇ ವಿಮಾ ಮೊತ್ತ ಕಡಿತಗೊಳಿಸಲಾಗುವುದು. ಆಕ್ಷೇಪಣೆಗಳಿದ್ದಲ್ಲಿ ಕೂಡಲೆ ಬ್ಯಾಂಕ್‌ಗಳನ್ನು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ಬೆಳಗಾವಿ: 0831-2431559, ಗೋಕಾಕ: 08332-229382, ಖಾನಾಪೂರ: 08336-223387, ಸವದತ್ತಿ: 08330-222082, ಅಥಣಿ: 08289-285099, ರಾಮದುರ್ಗ: 08335-241512, ರಾಯಬಾಗ : 08331-225049, ಹುಕ್ಕೇರಿ : 08333-265915 ಚಿಕ್ಕೋಡಿ : 08338-274943, ಬೈಲಹೊಂಗಲ : 08288-233758 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ತೋಟಗಾರಿಕೆ ಪ್ರಕಟಣೆ ತಿಳಿಸಿದೆ.