ಬೆಳಗಾವಿ-ದೆಹಲಿ ವಿಮಾನಯಾನ ಸೇವೆ ಆರಂಭ

05Manju10
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗಾವಿ-ದೆಹಲಿ ವಿಮಾನಯಾನ ಸೇವೆಗೆ ಸಂಸದೆ ಮಂಗಲ ಅಂಗಡಿ ಚಾಲನೆ ನೀಡಿದರು. ಈರಣ್ಣಾ ಕಡಾಡಿ, ಪ್ರಕಾಶ ಹುಕ್ಕೇರಿ, ತ್ಯಾಗರಾಜನ್, ಅಕ್ಷಯ ಪಾಟೀಲ ಇತರರು ಇದ್ದರು.
Published on

ಬೆಳಗಾವಿ: ನಗರದ ಜನರ ಬಹುದಿನಗಳ ಬೇಡಿಕೆಯಾಗಿ ಉಳಿದಿದ್ದ ಬೆಳಗಾವಿ-ದೆಹಲಿ ವಿಮಾನಯಾನ ಸೇವೆ ಗುರುವಾರ ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ರಾಜು ಸೇಠ್ ಇಂಡಿಗೋ ಏರಲೈನ್ಸ್ ನಿಂದ ಬೆಳಗಾವಿ-ದೆಹಲಿ ವಿಮಾನಯಾನ ಸೇವೆಗೆ ಚಾಲನೆ ನೀಡಿದರು. ಬೆಳಗಾವಿಯಿಂದ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ದೊರೆತಿರುವುದು ನಗರದ ಪ್ರಗತಿಯ ದಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದ್ದು, ಕೇವಲ 2 ಗಂಟೆ 30 ನಿಮಿಷದಲ್ಲಿ ದೆಹಲಿ ತಲುಪಬಹುದಾಗಿದೆ. ಪ್ರತಿ ನಿತ್ಯ ಈ ಸೇವೆ ಲಭ್ಯವಿರುವುದು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್, ಇಂಡಿಗೋ ಪೈಲಟ್ ಅಕ್ಷಯ ಪಾಟೀಲ, ಸಂಜಯ ಬಂಡಾರಿ, ಈರಣ್ಣ ದಯಣ್ಣವರ ಅನುಪ ಕಾಟಿ ಗುರುದೇವ ಪಾಟೀಲ, ಪ್ರಿಯಾಂಕಾ ಹಜರೇಕರ, ಜ್ಯೋತಿ ಶೆಟ್ಟಿ , ಶರದ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net