ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ಬೆಳಗಾವಿ ಬಾಲೆ ಮಾನ್ವಿ

SEA-8168-mail.jpg
Published on

ಬೆಳಗಾವಿ : ತೊದಲು ನುಡಿಯುವ ಬಾಲ್ಯದಲ್ಲಿಯೇ ಬೆಳಗಾವಿ ಬಾಲೆಯೊಬ್ಬಳು ಕೇವಲ ಐದೇ ನಿಮಿಷದಲ್ಲಿ 24 ನರ್ಸರಿ ರೈಮ್ಸ್‌ಗಳನ್ನೂ ಲೀಲಾಜಾಲವಾಗಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಗೈದಿದ್ದಾಳೆ.

ಬೆಳಗಾವಿ ಮಹಾನಗರದ ಫುಳಬಾಗಲ್ಲಿ ನಿವಾಸಿಗಾಳದ ಲಕ್ಷ್ಮೀ ಭರತ್ ನಿಲಜಕರ್ ದಂಪತಿಯ ಎರಡು ವರ್ಷ 11 ತಿಂಗಳ ಮಗು ಮಾನ್ವಿ ಈ ದಾಖಲೆ ಬರೆದಿದ್ದು, ರೈಮ್ಸ್ ಉಚ್ಛಾರಣೆಯಲ್ಲಿ ಈ ಮೊದಲು ಬೆಂಗಳೂರಿನ ಹಿಶಿತಾ ಕೆ. ಎಂಬ ಐದು ವರ್ಷದ ಮಗು 20 ಇಂಗ್ಲೀಷ್ ರೈಮ್ಸ್ ಹಾಗೂ ಮಹಾರಾಷ್ಟ್ರ ಅದ್ವಿಕಾ ಪಾಟಣಕರ್(4ವರ್ಷ 3 ತಿಂಗಳು) ಮಗು 22 ಇಂಗ್ಲೀಷ್ ರೈಮ್ಸ್ ಹೇಳಿರುವುದು ದಾಖಲೆಯಾಗಿತ್ತು. ಆದರೆ, ಇದೀಗ 2ವರ್ಷ 11 ತಿಂಗಳ ಮಾನ್ವಿ ಈ ಹಿಂದಿನ ಇವರೆಲ್ಲರ ದಾಖಲೆಗಳನ್ನು ಬ್ರೇಕ್ ಮಾಡಿ ಬೆಳಗಾವಿಗೆ ಕೀರ್ತಿ ತಂದಿದ್ದಾಳೆ.

ಕಳೆದ ಮೇ.13ರಂದು ಆನ್‌ಲೈನ್ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಅಧಿಕಾರಿಗಳ ಮುಂದೆ ‘ಜಾನಿ ಜಾನಿ ಎಸ್ ಪಪ್ಪಾ..’ ‘ಟ್ವಿಂಕಲ್ ಟ್ವಿಂಕಲ್...’, ‘ಓಲ್ಡ್ ಮೆಗ್‌ಡಾನಲ್ಡ್...‘ ಸೇರಿದಂತೆ ಇಂಗ್ಲೀಷನ್ 17,  ‘ಚಾಂದೋಬಾ ಚಾಂದೋಬಾ..’ ಹಾಗೂ ‘ಜುಕು ಜುಕು ಅಗೀನ ಗಾಡಿ’ ಎಂಬ 2 ಮರಾಠಿ ರೈಮ್ಸ್ ಹಾಗೂ ‘ಮಚಲಿ ಜಲ್ ಕಿ ರಾಣಿ’, ‘ಬಾರಿಷ್ ಆಯಾ ಚಮ್ ಚಮ್ ಚಮ್..’ ಸೇರಿದಂತೆ ಹಿಂದಿ ಭಾಷೆಯಲ್ಲಿ ಐದು ಸೇರಿದಂತೆ ಒಟ್ಟು 24 ನರ್ಸರಿ ರೈಮ್ಸ್‌ಗಳನ್ನು ಹೇಳುವ ಮೂಲಕ ನೂತನ ದಾಖಲೆ ಬರೆದಿದ್ದು, ಮೇ.23 ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಮೆಡಲ್ ಹಾಗೂ ಪ್ರಮಾಣ ಪತ್ರ ವಿತರಿಸಿದೆ.
ಮಾನ್ವಿ ತಂದೆ ಭರತ್ ನಿಲಜಕರ್ ಅವರು ನಗರದಲ್ಲಿನ ಅಂಗಡಿ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಲಕ್ಷ್ಮೀ ಸಹ ಶಿಕ್ಷಕಿಯಾಗಿದ್ದುಕೊಂಡು ಮನೆಯಲ್ಲಿ ಮಗುವಿನ ಶೈಕ್ಷಣಿಕ ಕಾಳಜಿ ವಹಿಸಿದ್ದಾರೆ. ಮಾನ್ವಿ ಕಳೆದ ಬಾರಿ ಆಗಸ್ಟ್‌ನಲ್ಲಿಯೂ ಕರ್ನಾಟಕ ಬುಕ್ ಆಫ್ ಅಚೀವರ್ಸ್ ದಾಖಲೆ ಮಾಡಿರುವುದು ಗಮನಾರ್ಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net