ಬೆಳಗಾವಿ ಬಾಲಕಿಯ ಕಾಲಡಿ ಹೆಡೆ ಬಿಚ್ಚಿದ ಹಾವು ; ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ರೋಚಕ ದೃಶ್ಯ

Screenshot_20230531_112315.webp
Published on

ಬೆಳಗಾವಿ : ಬೇಸಿಗೆ ಕಾಲ ಆರಂಭವಾದರೆ ಹಾವುಗಳು ಹೊರಗೆ ಬರುವುದು ಸಾಮಾನ್ಯ. ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಮನೆಯ ಹೊಸ್ತಿಲಲ್ಲಿದ್ದ ಹಾವನ್ನು ನೋಡದೆ ಪುಟ್ಟ ಬಾಲಕಿ ಕೂದಲೆಳೆಯಲ್ಲಿ ಪರಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.

ಹೊಸ್ತಿಲಲ್ಲಿದ್ದ ಹಾವನ್ನು ನೋಡದ ಬಾಲಕಿ ನೇರವಾಗಿ ಮನೆಯ ಒಳಗೆ ಕಾಲಿಡುತ್ತಾಳೆ. ಹಾವು ತಿರುಗುವುದನ್ನು ಕಂಡ ಬಾಲಕಿ ಮತ್ತೆ ಮನೆಯಿಂದ ಹೊರಗೆ ಗಾಬರಿಯಿಂದ ಓಡಿ ಹೋದ ದೃಶ್ಯವೂ ಸೇರೆಯಾಗಿದೆ. ಇದ್ನ ನೋಡಿದ ನೆಟ್ಟಿಗರು ಸಮಯ ಚನ್ನಾಗಿ ಇದ್ದರೆ ಸಾಯಿಸಲು ಸಾವಿರ ಜನ ಇದ್ದರೂ ಕಾಯೋಕೆ ಅಂತ ಭಗವಂತ ಇರ್ತಾನೆ ಅನ್ನೊ ಮಾತಿಗೆ ಈ ದೃಶ್ಯ ಸಾಕ್ಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net