

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3500ರೂ. ಬೆಂಬಲಬೆಲೆ ನೀಡುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ನಲ್ಲಿ ರೈತರು ನಡೆಸಿರುವ ಹೋರಾಟ ಬೆಂಬಲಿಸಿ ಇಲ್ಲಿಜ ಸುವರ್ಣ ಸೌಧ ಎದುರಿನಲ್ಲಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.
ಸುವರ್ಣ ಸೌಧ ಪ್ರವೇಶ ದ್ವಾರದ ಎದುರು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು, ಬೆಳಗಾವಿ-ಧಾರವಾಡ ಮಾರ್ಗ ಮಧ್ಯದಲ್ಲಿ ಹೆದ್ದಾರಿಯನ್ನು ತಡೆದು, ರಸ್ತೆ ಮಧ್ಯೆ ಟೈರ್‌ಗರ ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದರು.
ರೈತರ ಹೋರಾಟಕ್ಕೆ ಕರವೇ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ಸ್ಪಂದಿಸಬೇಕು. ಮುಂದೆ ರೈತರು ಕೈಗೊಳ್ಳುವ ಎಲ್ಲ ಬಗೆಯ ಹೋರಾಟಕ್ಕೆ ಕರವೇ ಬೆಂಬಲ ವ್ಯಕ್ತಪಡಿಸಲಿದೆ. ಬಂದ್ ಕೈಗೊಂಡರೂ ಬೆಂಬಲವಿದೆ ಎಂದು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದರು.
ಸುರೇಶ ಗವನ್ನವರ, ಗಣೇಶ ರೋಕಡೆ, ದತ್ತು ಹಕ್ಕ್ಯಾಗೋಳ, ವಿಠ್ಠಲ ಹಿಂಡಲಕರ, ಮಧು ಇಟಗಿ, ಸತೀಶ ಗುಡದವರ, ಬಸವರಾಜ ಕುಲಾರಕೊಪ್ಪ ಇತರರಿದ್ದರು.