

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯೋತ್ಸವಕ್ಕೆ ವಿರೋಧಿಯಾಗಿ ಎಂಇಎಸ್ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆ ವಿರುದ್ಧ ಪ್ರತಿಭಟಿಸಲು ಮುಂದಾದ ಕನ್ನಡಪರ ಸಂಘಟನೆಗಳ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಭಾಜಿ ಉದ್ಯಾನದಿಂದ ಕರಾಳ ದಿನ ರ‌್ಯಾಲಿ ಆರಂಭಿಸಿದ್ದ ಎಂಇಎಸ್‌ಗರು ಮರಾಠಾ ಮಂಡಳದತ್ತ ತೆರಳುತ್ತಿದ್ದಾಗ ಇದಕ್ಕೆ ಅಡ್ಡಿಯಾಗಿ ಪ್ರತಿಭಟಿಸಲು ಕರವೇ ಕಾರ್ಯಕರ್ತರು ಮುಂದಾಗಿದ್ದರು. ಈ ವೇಳೆ ಗೋಗಟೆ ವೃತ್ತದಲ್ಲಿ ಕಾರ್ಯಕರ್ತರನ್ನು ಪೊಲೀಸರು ತಡೆದು, ನಿಲ್ಲಿಸಿ ಮನವೋಲಿಸಲು ಯತ್ನಿಸಿದರು. ಆದರೆ ಕರವೇ ಕಾರ್ಯಕರ್ತರು ಜಗ್ಗದಿದ್ದಾಗ, ಕೊನೆಗೆ ಕನ್ನಡ ಪರ ಮುಖಂಡರಾದ ಮಹಾದೇವ ತಳವಾರ, ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಹೋರಾಟಗಾರರನ್ನು ವಶಕ್ಕೆ ಪಡೆದರು