ಮಾಜಿ ಸಚಿವ ಡಿ.ಬಿ.ಇನಾಂದಾರ್ ಇನ್ನಿಲ್ಲ…

IMG-20230425-WA0000.jpg
Published on


ಬೆಳಗಾವಿ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ  ಡಿ.ಬಿ ಇನಾಮದಾರ್ ಮಂಗಳವಾರ ನಿಧನರಾದರು.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಬಿ ಇನಾಮದಾರ್ ಅವರು  ನ್ಯುಮೋನಿಯಾ, ಲಂಗ್ಸ್ ಇಫೆಕ್ಷನ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನ ರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದಿಂದ  ಡಿ.ಬಿಇನಾಂದಾರ ಅವರು ಕಾಂಗ್ರೆಸ್ ನಿಂದ 9 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 5 ಸಲ‌ ಶಾಸಕರಾಗಿ ಆಯ್ಕೆಯಾಗಿದ್ದರು. ಎಸ್. ಎಂ. ಕೃಷ್ಣ ಸರ್ಕಾರದ ಹಲವು ಮಹತ್ವ ಖಾತೆ ನಿಭಾವಿಸಿದ್ದರು.
ಈ ಬಾರಿ ಚುನಟವಣೆಯಲ್ಲಿ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿ.ಬಿ ಇನಾಮದಾರ್ ಅವರು ಕಿತ್ತೂರು ಭಾಗದ ಧಣಿ ಎಂದೇ ಖ್ಯಾತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net