ಕಲೆಗಳನ್ನು ಉಳಿಸಿ ಬೆಳೆಸುವುದು ಅತ್ಯಅಗತ್ಯ: ಎಸ್​. ವಿ. ಸಂಕನೂರ

23GDG03 Cluster prog
ಗದಗ ತಾಲೂಕಿನ ಬೆಳದಡಿ ಗ್ರಾಮದ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಜರುಗಿದ ಕ್ಲಸ್ಟರ್​ ಮಟ್ಟದ ಪ್ರೌಢ ಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಮಾತನಾಡಿದರು. ಕೃಷ್ಣೇಗೌಡ ಪಾಟೀಲ, ವಿ.ವಿ. ನಡುವಿನಮನಿ, ಸಿ.ಬಿ. ಪಾಟೀಲ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳಲ್ಲಿ ಇರುವ ಸೂಕ್ತ ಪ್ರತಿಭೆಗಳ್ನು ಗುರುತಿಸಿ ಅವರಿಗೆ ಪ್ರೊತ್ಸಾಹ ನೀಡುವುದು ಮತ್ತು ವಿದ್ಯಾಥಿರ್ಗಳ ಪ್ರಾದೇಶಿಕ ಕಲೆಗಳ ಮಹತ್ವವನ್ನು ಅರಿತುಕೊಳ್ಳಲು ಕ್ಲಸ್ಟರ್​ ಕಾರ್ಯಕ್ರಮಗಳನ್ನು ನಡೆಸುವುದು ಅವಶ್ಯ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಹೇಳಿದರು.
ತಾಲೂಕಿನ ಬೆಳದಡಿ ಗ್ರಾಮದ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ಕ್ಲಸ್ಟರ್​ ಮಟ್ಟದ ಪ್ರೌಢ ಶಾಲಾ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾರತದ ಭವ್ಯ ಪರಂಪರೆಯ ಸಾಂಸತಿಕ ಸೂಕ್ತ ಕಲೆಗಳನ್ನು ಬೆಳೆಸಿ ಉಳಿಸುವುದು ಅತ್ಯಗತ್ಯ. ಮಕ್ಕಳು ಇಂದಿನ ದಿನಗಳಲ್ಲಿ ಹೆಚ್ಚಾಗಿ ಪಾಶ್ಚಿಮಾತ್ಯ ಸಂಸತಿಯನ್ನು ಅನುಸರಿಸುತ್ತಿರುವುದು ವಿಷಾದನೀಯ ಎಂದರು.
ಕೃಷ್ಣೇಗೌಡ ಎಚ್​. ಪಾಟೀಲ ಮಾತನಾಡಿ, ವಿದ್ಯಾಥಿರ್ಗಳು ಕೇವಲ ನೌಕರಿಗಾಗಿ ಶಿಣ ಪಡೆಯದೇ ಇಂದಿನ ವೈಜ್ಞಾನಿಕ ಯುಗದಲ್ಲಿ ವಿವಿಧ ತಾಂತ್ರಿಕ ಕೋರ್ಸ್​ಗಳನ್ನು ಅಭ್ಯಾಸ ಮಾಡಿ ಉದ್ಯೋಗಪತಿ ಆಗುವತ್ತ ಶ್ರಮ ವಹಿಸಬೇಕು ಎಂದರು.
ಗ್ರಾಮೀಣ ವಲಯದ ೇತ್ರ ಶಿಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ವಿದ್ಯಾಥಿರ್ಗಳು ಪಾಠವನ್ನು ಆಸಕ್ತಿಯಿಂದ ಆಲಿಸಿ, ಆಟಗಳಲ್ಲಿ, ಇಂತಹ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ತಮ್ಮ ಸೂಪ್ತ ಕಲೆಯನ್ನು ಪ್ರದಶಿರ್ಸಬೇಕು ಎಂದು ತಿಳಿಸಿದರು.
ಸಿ.ಬಿ. ಪಾಟೀಲ, ಎಚ್​.ಟಿ. ಸಂಜೀವಸ್ವಾಮಿ, ಕೆ. ಎಚ್​. ಬೇಲೂರ, ಎಸ್​.ಡಿ. ಹೊಸಳ್ಳಿ, ಶ್ರೀಕಾಂತ ಎಚ್​, ಜೆ. ಎ. ಭಾವಿಕಟ್ಟಿ. ಬಿ. ಎ್​. ಪೂಜಾರ, ಎಚ್​.ಜಿ. ಗದ್ದಿಗೌಡರ, ವಿ. ಸಿ. ನರೇಗಲ್ಲಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net