

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದ ನೂತನ ವ್ಯವಸ್ಥಾಪಕರಾಗಿ (ಡಿಆರ್ಎಂ) ಬೇಲಾ ಮೀನಾ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
1996ರ ಬ್ಯಾಚ್ನ ಭಾರತೀಯ ರೈಲ್ವೆ ಸಂಚಾರ ಸೇವೆಯ (ಐಆರ್ಟಿಎಸ್) ಅಧಿಕಾರಿಯಾಗಿರುವ ಅವರು, 1997ರ ಸೆ. 4ರಂದು ಭಾರತೀಯ ರೈಲ್ವೆಯಲ್ಲಿ ವೃತ್ತಿ ಜೀವನ ಆರಂಭಿಸಿದರು.
27 ವರ್ಷಗಳ ಸೇವಾ ಅನುಭವ ಹೊಂದಿರುವ ಬೇಲಾ ಮೀನಾ ಅವರು ಈ ಮೊದಲು ಹಿರಿಯ ವಾಣಿಜ್ಯ ವ್ಯವಸ್ಥಾಪಕರಾಗಿ, ಮುಖ್ಯ ಯೋಜನಾ ವ್ಯವಸ್ಥಾಪಕರಾಗಿ, ಹಿರಿಯ ಟ್ರಾನ್ಸಪೋರ್ಟೆಷನ್ ವ್ಯವಸ್ಥಾಪಕರಾಗಿ ಹಾಗೂ ಶುಲ್ಕರಹಿತ ಆದಾಯ ಮತ್ತು ಪ್ರಯಾಣಿಕರ ಮಾರುಕಟ್ಟೆ ವಿಭಾಗದಲ್ಲಿ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.