ಬೇಕಲಕೋಟೆ ಬಾವಿಗಳಿಗೆ ಮರುಜೀವ : ಕೇಂದ್ರ ಜಲಸಂಪನ್ಮೂಲ ಇಲಾಖೆಯಿಂದ ಕಾರ್ಯ

bekala kote
ಕೇಂದ್ರ ಪ್ರಾಚ್ಯವಸ್ತು ಇಲಾಖೆ ತ್ರಿಶ್ಯೂರ್ ಸರ್ಕಲ್ ಅಧೀಕ್ಷಕ, ಪ್ರಾಚ್ಯವಸ್ತು ತಜ್ಞ ಕೆ.ರಾಮಕೃಷ್ಣ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಬೇಕಲ ಕೋಟೆ ಸಂದರ್ಶನ ನಡೆಸಿತು.
Published on

ಕಾಸರಗೋಡು: ಅಮೃತ ಸರೋವರ ಯೋಜನೆಯಡಿ ಬೇಕಲ ಕೋಟೆಯ ಹೊರಭಾಗದ 3 ಹಾಗೂ ಒಳಗಿನ 20 ಬಾವಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ಕಸ ಸುರಿಯುವುದನ್ನು ತಡೆಯಲು ಕಬ್ಬಿಣದ ಗ್ರಿಲ್ ಅಳವಡಿಸುವ ಕಾರ್ಯ ಹಮ್ಮಿಕೊಳ್ಳಲಾಯಿತು.

ಬೇಕಲ ಕೋಟೆಯೊಳಗಿನ ಎರಡು ಬಾವಿಗಳಿಗೆ ಇಳಿದು ಸಾಗುವ ರೀತಿಯಲ್ಲಿ ಕಾಲುದಾರಿಗಳಿದ್ದು, ಈ ಬಾವಿಗಳ ಸುರಕ್ಷತೆಗಾಗಿ ಹೊಸದಾಗಿ ಸೈಡ್ ಗ್ರಿಲ್ ಅಳವಡಿಸಲಾಗುವುದು. ಯೋಜನೆ ಅಂಗವಾಗಿ 7 ಬಾವಿಗಳ ಕೆಸರುಮಣ್ಣು ತೆರವುಗೊಳಿಸಿ, ಕುಸಿತಕ್ಕೊಳಗಾಗಿರುವ ಭಾಗವನ್ನು ಕೆಂಪುಕಲ್ಲು ಕಟ್ಟಿ ಸಂರಕ್ಷಿಸಲಾಗಿದೆ. ಬಾವಿ ಹೊರಾಂಗಣದಲ್ಲಿ ಸಂಚಾರಕ್ಕಾಗಿ ಕೆಂಪುಕಲ್ಲು ಹಾಸಿ ಕಾಲ್ನಡೆ ಹಾದಿ ನಿರ್ಮಿಸಲಾಗಿದೆ.

ಅಮೃತ್ ಸರೋವರ್ ಯೋಜನೆಯನ್ವಯ ನಡೆಸಲಾಗಿರುವ ಕಾಮಗಾರಿ ವೀಕ್ಷಣೆಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ತ್ರಿಶ್ಯೂರ್ ಸರ್ಕಲ್ ಅಧೀಕ್ಷಕ, ಪ್ರಾಚ್ಯವಸ್ತು ತಜ್ಞ ಕೆ.ರಾಮಕೃಷ್ಣ ರೆಡ್ಡಿ ಮತ್ತು ಉಪ ಅಧೀಕ್ಷಕ ಸಿ.ಕುಮಾರನ್ ಬೇಕಲ ಕೋಟೆಗೆ ಭೇಟಿ ನೀಡಿದ್ದರು. ಬೇಕಲಕೋಟೆ ಪ್ರಭಾರ ಕನ್ಸರ್ವೇಟಿವ್ ಅಸಿಸ್ಟೆಂಟ್ ಶಾಜು ಪಿ.ವಿ., ಬೇಕಲ ಪ್ರವಾಸೋದ್ಯಮ ಫ್ರೆಟರ್ನಿಟಿ ಅಧ್ಯಕ್ಷ ಸೈಫುದ್ದೀನ್ ಕಳನಾಡ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net