ಬೇಕಲ ಕೋಟೆ ಕಮಾನು ಹಳೇ ಭಾವಚಿತ್ರ ಆಹ್ವಾನ

bekal
Published on

ಕಾಸರಗೋಡು: ಬೇಕಲ ಕೋಟೆಯ ಎರಡನೇ ದ್ವಾರದ ಕಮಾನು ನವೀಕರಿಸಿ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಪ್ರಾಚ್ಯವಸ್ತು ಇಲಾಖೆ ತೃಶ್ಶೂರ್ ಸರ್ಕಲ್ ಹಾಗೂ ಬೇಕಲ ಪ್ರವಾಸೋದ್ಯಮ ಬಂಧುಗಳು ಜಂಟಿಯಾಗಿ ಹಳೆಯ ಛಾಯಾಚಿತ್ರ ಅಭಿಯಾನ ನಡೆಸುತ್ತಿವೆ.

ಕೋಟೆಯೊಳಗಿನ ಮುಖ್ಯ ಪ್ರಾಣ ದೇವಾಲಯದ ನಂತರ ಹಳೇ ಟಿಕೆಟ್ ಕೌಂಟರ್ ಸನಿಹ ಎರಡನೇ ಗೇಟ್ ಇದ್ದು, ಪ್ರಸಕ್ತ ದ್ವಾರದ ಮೇಲಿದ್ದ ಕಮಾನು ಕ್ರಮೇಣ ನಾಪತ್ತೆಯಾಗಿದೆ. ಈ ಕಮಾನಿನ ಭಾವಚಿತ್ರ ಇದ್ದರೆ ಕಳುಹಿಸಿಕೊಡುವಂತೆ ವಿನಂತಿಸಲಾಗಿದೆ. ಭಾವಚಿತ್ರ ಕಳುಹಿಸಿಕೊಟ್ಟವರಿಗೆ ಪ್ರಶಂಸಾ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ಸ್ವೀಕಾರಗೊಳ್ಳುವ ಫೋಟೋಗಳ ಆಧಾರದಲ್ಲಿ ಕಮಾನು ಮರುಸೃಷ್ಟಿಸಲು ಕ್ರಮ ತೆಗೆದುಕೊಳ್ಳಲಾಗುವುದಾಗಿ ತೃಶ್ಶೂರ್ ವೃತ್ತದ ಪ್ರಾಚ್ಯವಸ್ತು ಇಲಾಖೆ ಮುಖ್ಯಸ್ಥ ಕೆ.ರಾಮಕೃಷ್ಣ ರೆಡ್ಡಿ ಮಾಹಿತಿ ನೀಡಿದ್ದಾರೆ. ಫೋಟೋಗಳನ್ನು ನವೆಂಬರ್ 15ರ ಮುಂಚಿತವಾಗಿ Circlethr.asi@gmail.comಮತ್ತುbekaltourismfraternity@gmail.com ಎರಡೂ ಇ-ಮೇಲ್ ವಿಳಾಸಗಳಿಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net