ಅಕ್ರಮ ಮದ್ಯ ಮಾರಾಟ ಇಬ್ಬರ ಬಂಧನ

crime
Published on


ಮಂಗಳೂರು:ನಗರದ ಬಿಜೈ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.


ಚಿದಾನಂದ ಚಿತ್ತು (35) ಮತ್ತು ಸ್ವಾಮಿ ಗೌಡ (56) ಬಂಧಿತ ಆರೋಪಿಗಳು.


ಆ.25ರಂದು ಬೆಳಗ್ಗೆ 6.30ರ ವೇಳೆಗೆ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಇರುವ ಕಟ್ಟಡದ ಹೋಟೇಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಪ್ಲಾಸ್ಟೀಕ್ ಚೀಲವೊಂದರಲ್ಲಿ ಮದ್ಯದ ಪ್ಯಾಕೇಟ್‌ಗಳನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ಸಂದರ್ಭ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ವಶದಲ್ಲಿದ್ದ ಸುಮಾರು 5760 ರೂ. ಮೌಲ್ಯದ 90ಎಂ.ಎಲ್. ನ 128 ಸಾರಾಯಿ ಟೆಟ್ರಾ ಪ್ಯಾಕೇಟ್‌ಗಳನ್ನು ಅಲ್ಲದೇ ಸಾರಾಯಿ ಮಾರಾಟ ಮಾಡಿ ಬಂದ 2,500 ರೂ.ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಬಾರ್ ಮಾಲೀಕ ಬಾಲಕೃಷ್ಣ ಪೂಂಜಾ ಹಾಗೂ ಇಬ್ಬರು ಆರೋಪಿಗಳ ವಿರುದ್ದ ಅಬಕಾರಿ ಕಾಯಿದೆ ಅಡಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net